Monday, August 15, 2022
Powertv Logo
Homeದೇಶಬಿಜೆಪಿ ವಿರುದ್ಧ 'ಒಕ್ಕೂಟ ಭಾರತ್ ಸಮಾವೇಶ'

ಬಿಜೆಪಿ ವಿರುದ್ಧ ‘ಒಕ್ಕೂಟ ಭಾರತ್ ಸಮಾವೇಶ’

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ವಿಪಕ್ಷಗಳೆಲ್ಲ ಒಂದಾಗುತ್ತಿವೆ. ಅದಕ್ಕಾಗಿ ಇಂದು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ‘ಒಕ್ಕೂಟ ಭಾರತ್ ಸಮಾವೇಶ’ ಕರೆಯಲಾಗಿದೆ. ಮಮತಾ ಬ್ಯಾನರ್ಜಿ ಈಗಾಗಲೇ ಕೊಲ್ಕತ್ತಾದ ಬ್ರಿಗೇಡ್​ ಪರೇಡ್​ ಮೈದಾನಕ್ಕೆ ತಲುಪಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್​, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್​, ಮಾಜಿ ಬಿಜೆಪಿ ನಾಯಕ ಅರುಣ್​ ಶೌರಿ, ಲೋಕತಾಂತ್ರಿಕ್​ ಜನತಾ ದಳದ ನಾಯಕ ಶರದ್​ ಯಾದವ್​ ಅವರು ಸಮಾವೇಶಕ್ಕೆ ಬಂದಿದ್ದಾರೆ. ಕಾರ್ಯಕ್ರಮದಲ್ಲಿ 25 ಜನ ಪ್ರಮುಖ ರಾಜಕೀಯ ಮುಖಂಡರು ವೇದಿಕೆಯನ್ನು ಅಲಂಕರಿಸಲಿದ್ದಾರೆ. ಇನ್ನು ವಿವಿಧ ಪಕ್ಷಗಳ 20 ನಾಯಕರು ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಸಹ ಇಂದಿನ ಸಭೆಗೆ ತೆರಳುವ ಸಾಧ್ಯತೆಗಳಿವೆ.

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಎದುರಾಗಿ ರಾಜಕೀಯ ಪಕ್ಷಗಳನ್ನು ಸಂಘಟಿಸುವ ಉದ್ದೇಶದಿಂದ ‘ಯುನೈಟೆಡ್​ ಇಂಡಿಯಾ ರ್ಯಾಲಿ’ಯನ್ನು ಆಯೋಜಿಸಲಾಗಿದೆ. ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಮಮತಾ ಬ್ಯಾನರ್ಜಿ ಟ್ವೀಟ್​ ಮಾಡಿದ್ದು, “ಬಲಿಷ್ಠವಾದ, ಪ್ರಗತಿಯ, ಏಕತೆಯ ಭಾರತ ನಿರ್ಮಾಣದ ಶಪಥ ಮಾಡುವ ಈ ಸಮಾವೇಶಕ್ಕೆ ಎಲ್ಲ ರಾಷ್ಟ್ರೀಯ ನಾಯಕರನ್ನು, ಬೆಂಬಲಿಗರನ್ನು, ಜನರನ್ನು ನಾನು ಸ್ವಾಗತಿಸುತ್ತೇನೆ” ಅಂತ ಬರೆದುಕೊಂಡಿದ್ದಾರೆ.

5 ವೇದಿಕೆ, 20 ಎಲ್​ಇಡಿ ಪರದೆ: ಬ್ರಿಗೇಡ್​ ಪರೇಡ್​ ಮೈದಾನದಲ್ಲಿ 7 ಲಕ್ಷ ಜನ ಸೇರಲು ಸಾಧ್ಯವಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಪಕ್ಷ 40 ಲಕ್ಷ ಜನ ಸಮಾವೇಶದಲ್ಲಿ ಭಾಗಯಾಗಲಿದ್ದಾರೆ ಅಂತ ತಿಳಿಸಿದೆ. ಸಮಾವೇಶಕ್ಕಾಗಿ 5 ದೊಡ್ಡ ವೇದಿಕೆಗಳನ್ನು ನಿರ್ಮಿಸಲಾಗಿದ್ದು, 20 ಎಲ್​ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಭದ್ರತಾ ದೃಷ್ಟಿಯಲ್ಲಿ ಮೈದಾನವನ್ನು ಒಟ್ಟು 22 ವಲಯಗಳನ್ನಾಗಿ ವಿಭಾಗಿಸಲಾಗಿದ್ದು, 3000 ಪಕ್ಷದ ಸ್ವಯಂಸೇವಕರು ಸೇರಿ ಪೊಲೀಸರು, ಕಮಿಷನರ್​ಗಳೂ ಭದ್ರತಾ ವಿಚಾರವಾಗಿ ಕಾರ್ಯ ನಿರ್ವಹಿಸಲಿದ್ದಾರೆ.

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments