Tuesday, January 18, 2022
Powertv Logo
Homeತಂತ್ರಜ್ಞಾನಒಮಿಕ್ರಾನ್​ಗೆ 2 ತಿಂಗಳಲ್ಲಿ ಬೇರೆ ಲಸಿಕೆ ಸಿದ್ಧಪಡಿಸುತ್ತೇವೆ- ಮಾಡರ್ನ ಕಂಪನಿ

ಒಮಿಕ್ರಾನ್​ಗೆ 2 ತಿಂಗಳಲ್ಲಿ ಬೇರೆ ಲಸಿಕೆ ಸಿದ್ಧಪಡಿಸುತ್ತೇವೆ- ಮಾಡರ್ನ ಕಂಪನಿ

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡ ಬಳಿಕ ಹಲವು ದೇಶಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ಭಾರತವೂ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಯುಕೆ ಸೇರಿ ಹೈ ರಿಸ್ಕ್​ ದೇಶಗಳ ಸಾಲಿಗೆ ಸೇರುವ ಒಟ್ಟು 13 ದೇಶಗಳಿಂದ ಬರುವ ಪ್ರಯಾಣಿಕರು ಭಾರತ ತಲುಪುತ್ತಿದ್ದಂತೆ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಒಂದೊಮ್ಮೆ ನೆಗೆಟಿವ್​ ಬಂದರೂ 7 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್​ ಆಗಬೇಕು. ಎಂಟನೇ ದಿನಕ್ಕೆ ಇನ್ನೊಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದೆ.

ಕೊರೋನಾ ಹೊಸ ರೂಪಾಂತರವಾದ ಒಮಿಕ್ರಾನ್, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳನ್ನು ತಲುಪಿದ್ದು ಸಾಕಷ್ಟು ಭೀತಿ ಸೃಷ್ಟಿಸಿದೆ. ಒಮಿಕ್ರಾನ್ ಬೆದರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಲಸಿಕೆ ಕಂಪನಿ ಮಾಡರ್ನ, ಒಮಿಕ್ರಾನ್ ಹೊಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆಯ ಅಗತ್ಯವಿದ್ದರೆ 2 ರಿಂದ 3 ತಿಂಗಳಲ್ಲಿ ತಯಾರಿಸುತ್ತೇವೆ ಎಂದು ಕಂಪನಿಯು ಭರವಸೆ ನೀಡಿದೆ.

ಒಮಿಕ್ರಾನ್ ರೂಪಾಂತರದ ವಿಶೇಷ ಲಸಿಕೆ (ಒಮಿಕ್ರಾನ್ ಸ್ಪೆಸಿಫಿಕ್) 2 ರಿಂದ 3 ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಮಾಡರ್ನ ವ್ಯಾಕ್ಸಿನ್ ಕಂಪನಿ ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕರೋನಾದ ಹೊಸ ರೂಪಾಂತರಿ ವೈರಸ್​​ನಿಂದಾಗಿ ಜಗತ್ತು ಮತ್ತೆ ಸಮಸ್ಯೆಗೆ ಸಿಲುಕಿದೆ. ಈ ಹೊಸ ರೂಪಾಂತರಿ ವೈರಸ್​​ನ್ನು ನಿಯಂತ್ರಿಸುವಲ್ಲಿ ಚಾಲ್ತಿಯಲ್ಲಿರುವ ಲಸಿಕೆ ಪರಿಣಾಮಕಾರಿವಾಗಲಿದೆ ಅನ್ನೋದು ಇನ್ನೂ ಕೂಡ ಹೇಳಲು ಸಾಧ್ಯವಾಗಿಲ್ಲ.ಆದ್ದರಿಂದ ಒಮಿಕ್ರಾನ್ ಜೊತೆ ಹೋರಾಡಲು ನಾವು ಮತ್ತೊಂದು ವಿಶೇಷ ಲಸಿಕೆಯನ್ನು ಸಿದ್ಧಪಡಿಸುತ್ತೇವೆ.

ಮಾಡರ್ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಪಾಲ್ ಬರ್ಟನ್ ಹೇಳಿಕೆ ಪ್ರಕಾರ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ.ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್​ಗೆ ಪ್ರತ್ಯೇಕ ಲಸಿಕೆ ಅಗತ್ಯಬಿದ್ದರೆ, ಅದು ಕೆಲವೇ ವಾರಗಳಲ್ಲಿ ತಯಾರು ಮಾಡುವ ಭರವಸೆಯನ್ನು ನಾವು ನೀಡಬಹುದು. ಈ ರೂಪಾಂತರ ಮತ್ತು ಲಸಿಕೆ ದಕ್ಷತೆಯ ಕುರಿತು ವಿಜ್ಞಾನಿಗಳು ಹೀಗಾಗಲೇ ಸಂಶೋಧನೆ ನಡೆಸುತ್ತಿದ್ದಾರೆ. ಲಸಿಕೆ ಹಾಕಿದ್ದರೂ, ಈ ರೂಪಾಂತರಿ ಸೋಂಕಿತರ ಮಾದರಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments