ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ದೃಢ ನಿರ್ಧಾರ

0
254

ದೆಹಲಿ: ಜಮ್ಮುಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್​ಪಿಎಫ್ ಯೋಧರ ಮೇಲೆ ನಡೆದ ದಾಳಿಯನ್ನು ಎಲ್ಲಾ ಪಕ್ಷಗಳು ಖಂಡಿಸಿದ್ದು, ಇದೊಂದು ಭೀಕರ ಭಯೋತ್ಪಾದಕ ಕೃತ್ಯ ಅಂತ ಹೇಳಿದ್ದಾರೆ.

ಕಾಂಗ್ರೆಸ್​, ಬಿಜೆಪಿ ಸೇರಿ ದೆಹಲಿಯಲ್ಲಿ ಇಂದು ಸರ್ವಪಕ್ಷ ಸಭೆ ನಡೆದಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಲಾಗಿದೆ. ಪಾಕಿಸ್ತಾನವನ್ನು ನೇರವಾಗಿ ಹೆಸರಿಸದೆ, ನೆರೆ ರಾಷ್ಟ್ರ ಗಡಿ ಪ್ರದೇಶದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ಉಗ್ರ ಚಟುವಟಿಕೆಗಳಿಗೆ ನೆರೆ ರಾಷ್ಟ್ರ ನೆರವು ಮತ್ತು ಬೆಂಬಲ ನೀಡುತ್ತಿದೆ ಅಂತ ಸಭೆಯಲ್ಲಿ ಚರ್ಚೆಯಾಯಿತು. 

ಫೆಬ್ರವರಿ 14ರಂದು ನಡೆದ ಉಗ್ರ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಸಂದರ್ಭದಲ್ಲಿ ನಾವು ನಮ್ಮ ಯೋಧರೊಂದಿಗೆ ನಿಲ್ಲುತ್ತೇವೆ. ಹಾಗೇ ಯೋಧರ ಕುಟುಂಬದ ಜೊತೆ ನಿಲ್ಲುತ್ತೇವೆ. ಕಳೆದ ಮೂರು ದಶಕಗಳಲ್ಲಿ ಭಾರತ ಹಲವು ಸಲ ಭಯೋತ್ಪಾದನೆಯ ಭೀಕರತೆಯನ್ನು ನೋಡಿದೆ. ಹಾಗೇ ಅದನ್ನು ಸಮರ್ಥವಾಗಿ ಎದುರಿಸಿಕೊಂಡು ಬಂದಿದೆ ಎಂದು ಸರ್ವಪಕ್ಷ ಸಭೆಯಲ್ಲಿ ಹೇಳಲಾಗಿದೆ. ಭಯೋತ್ಪಾದನೆ ವಿರುದ್ಧ ಎಲ್ಲ ಪಕ್ಷಗಳೂ ಕೆಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವ ದೃಢ ನಿರ್ಧಾರ ಮಾಡಲಾಗಿದೆ.

ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘುಲಮ್​ ನಬಿ ಅಝಾದ್, ಕಾಂಗ್ರೆಸ್​ ಆನಂದ್​ ಶರ್ಮಾ, ಜ್ಯೋತಿರಾಧಿತ್ಯ ಸಿಂಧಿಯಾ,  ಟಿಎಂಸಿ ಪಕ್ಷದಿಂದ ಸುದೀಪ್ ಬಂದ್ಯೋಪಾಧ್ಯಾಯ್ ಹಾಗೂ ಒಬ್ರಿಯೆನ್​, ಶಿವಸೇನೆಯ ಸಂಜಯ್ ರಾವತ್, ಟಿಆರ್​ಎಸ್​ನ ಜಿತೇಂದ್ರ ರೆಡ್ಡಿ, ಸಿಪಿಐನ ಡಿ. ರಾಜಾ, ನ್ಯಾಷನಲ್ ಕಾನ್ಫರೆನ್ಸ್​ನ ಫರೂಕ್ ಅಬ್ದುಲ್ಲ, ಎಲ್​ಜೆಪಿಯಿಂದ ರಾಮ್​​ ವಿಲಾಸ್  ಪಾಸ್ವಾನ್​ ಸೇರಿ ಪ್ರಮುಖರು ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here