ಬಳ್ಳಾರಿ : ಕಾಂಗ್ರೇಸ್ ಅಧಿಕಾರ ಇಲ್ಲದೇ ಇರೋ ರಾಜ್ಯದಲ್ಲಿ ಸಣ್ಣ ಪುಟ್ಟದನ್ನ ದೊಡ್ಡದು ಮಾಡುತ್ತಿದೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಬಳ್ಳಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಅಧಿಕಾರ ಇಲ್ಲದೇ ಇರೋ ರಾಜ್ಯದಲ್ಲಿ ಸಣ್ಣ ಪುಟ್ಟದನ್ನ ದೊಡ್ಡದು ಮಾಡುತ್ತಿದೆ. ಕೆಜೆಹಳ್ಳಿ ಡಿಜೆ ಹಳ್ಳಿ ಘಟನೆ, ಶಿವಮೊಗ್ಗದಲ್ಲಿ ಇದು ನಿವಾಗಿದೆ. ಇನ್ನು ಮುಂದಕ್ಕೆ ಇಂತಹ ಘಟನೆ ನಡೆದ್ರೆ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ದಲ್ಲಿ ತೆಗೆದುಕೊಂಡ ನಿರ್ಧಾರ ತೆಗೆದುಕೊಳ್ಳಲಾಗತ್ತೆ. ನಾವು ಪ್ರಚೋದನೆ ಮಾಡಿ ಮತ ಪಡೆಯೋರಲ್ಲ. ಒಂದು ಸಾವಿರ ಜನರನ್ನ ಸೇರಿಸಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಗಲಭೆಯನ್ನ ನಿಯಂತ್ರಿಸಲು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಮಾದರಿ ಅನಿವಾರ್ಯವಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡುವುದು, ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಮಾಡುವರಿಗೆ ಯುಪಿ ಹಾಗೂ ಎಂಪಿ ಮಾದರಿ ಉತ್ತಮ. ಸಣ್ಣ ಘಟನೆ ನಡೆದಾಗ ಸರ್ಕಾರದ ವೈಫಲ್ಯ ಅನ್ನೋಕ್ ಆಗಲ್ಲ. ಸ್ವಾಮೀಜಿಯಿಂದ ಕಮೀಷನ್ ಆರೋಪ ವಿಚಾರವಾಗಿ ಸಿಎಂ ಈಗಾಗಲೇ ಹೇಳಿದ್ದಾರೆ, ಸ್ವಾಮಿಜಿಗಳು ಪೂರ್ಣ ಮಾಹಿತಿ ಕೊಟ್ಟರೆ ತನಿಖೆ ಮಾಡುತ್ತೇವೆ ಎಂದಿದ್ದಾರೆ. ಯಾವ ಆಧಾರದಲ್ಲಿ ಸ್ವಾಮಿಗಳು ಹೇಳಿದ್ದಾರೆ ಕಾದು ನೋಡೋಣ ಎಂದರು.