ಬೆಂಗಳೂರು: ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯದೆಲ್ಲೆಡೆ ಲಾಕ್ಡೌನ್ ಆದೇಶವನ್ನು ಹೊರಡಿಸಿ ಜನತೆ ಮನೆಯಿಂದ ಹೊರಬರದಂತೆ ನೋಡಿಕೊಳ್ಳಲಾಗುತ್ತಿದೆ. ಆದರೂ ಜನರು ಅದನ್ನು ಲೆಕ್ಕಿಸದೆ ಅನಾವಶ್ಯಕವಾಗಿ ಮನೆಯಿಂದ ಹೊರಬಂದು ಓಡಾಡುತ್ತಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿನಿ ಕಟೋಚ್, ‘ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ, ಈಗ ನಿಮ್ಮ ಸರದಿ, ನಿಮ್ಮ ಕರ್ತವ್ಯವನ್ನು ನೀವು ಪಾಲಿಸಿ‘ ಎಂದು ಹೇಳಿದ್ದಾರೆ. ಅಲ್ಲದೆ ದಕ್ಷಿಣ ವಿಭಾಗದ ವ್ಯಾಪಾರಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ವಿತರಿಸಲಾಗಿದೆ.
Mask and sanitisers have been distributed to all vegetable vendors.. we have done our duty.. now it is time to do yours #StayHomeIndia #ArrestCorona #bcpsouth #Covid_19india @BlrCityPolice https://t.co/H88ftPcK0v
— Dr. Rohini Katoch Sepat. IPS (@DCPSouthBCP) April 11, 2020