Sunday, June 26, 2022
Powertv Logo
Homeರಾಜ್ಯನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿದು ಮೂವರ ದುರ್ಮರಣ..!

ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿದು ಮೂವರ ದುರ್ಮರಣ..!

ಬೆಂಗಳೂರು : ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿದು ಮೂವರು ಕಾರ್ಮಿಕರು ದುರ್ಮರಣವನ್ನಪ್ಪಿದ ಘಟನೆ ಲುಂಬಿನಿ ಗಾರ್ಡನ್​ ಬಳಿಯ ನಾಗವಾರದ ಜೋಗಪ್ಪ ಲೇಔಟ್​ನಲ್ಲಿ ನಡೆದಿದೆ.
ಬೃಹತ್ ಪ್ರಮಾಣದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಟ್ಯಾಂಕ್​ ಇದಾಗಿದ್ದು, ಟ್ಯಾಂಕ್​ ಒಳಭಾಗದಲ್ಲಿ ಸೆಂಟ್ರಿಂಗ್​ ಕುಸಿದಿದೆ. ಕಾಮಗಾರಿಗೆ ಒಳಭಾಗದಲ್ಲಿದ್ದ ಕಾರ್ಮಿಕರ ಮೇಲೆ ಕುಸಿದ ಸೆಂಟ್ರಿಂಗ್​ ಸಾಮಗ್ರಿಗಳು ಬಿದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮೃತರು ಬಿಹಾರ ಮೂಲದವರು ಅಂತ ತಿಳಿದು ಬಂದಿದೆ. ಅವಶೇಷಗಳಡಿ ಇನ್ನೂ 10 ಮಂದಿ ಸಿಲುಕಿರುವ ಶಂಕೆ ಇದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್​ ಕುಮಾರ್ ಸಿಂಗ್, ಡಿಸಿಪಿ ಕಲಾಕೃಷ್ಣಮೂರ್ತಿ ಭೇಟಿ ನೀಡಿದ್ದಾರೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments