Home ರಾಜ್ಯ ತೋಟಗಾರಿಕೆ ವಿವಿಯಲ್ಲಿ ನೀರಿಗೆ ಬರ..!

ತೋಟಗಾರಿಕೆ ವಿವಿಯಲ್ಲಿ ನೀರಿಗೆ ಬರ..!

ಬಾಗಲಕೋಟೆ: ರಾಜ್ಯದ ಮೊದಲ ತೋಟಗಾರಿಕಾ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿರೋ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನೀರಿನ ಬರ ಎದುರಾಗಿದೆ. ನೀರಿಲ್ಲದೇ ಬೆಳೆಗಳು, ಗಿಡ ಮರಗಳು ಒಣಗಿ ಹೋಗ್ತಿದೆ. ಪ್ರತಿನಿತ್ಯ ನೀರಿಗಾಗಿ ವಿವಿ ಜನ ಅಂಗಲಾಚುತ್ತಿದ್ದಾರೆ.

2009ರಲ್ಲಿ ಆರಂಭವಾಗಿರೋ ಈ ವಿಶ್ಯವಿದ್ಯಾಲಯ 300 ಎಕರೆಯಷ್ಟು ವ್ಯಾಪಿಸಿದೆ. ಬೃಹತ್ ಕಟ್ಟಡವೇನೋ ಇದೆ. ಆದ್ರೆ ಬೇಸಿಗೆ ಬಂತಂದ್ರೆ ಇಲ್ಲಿ ನೀರಿಗಾಗಿ ಪರದಾಡೋದು ಮಾತ್ರ ತಪ್ಪಲ್ಲ.

ಈ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಶೋಧನೆ ಮಾಡೋಕೆ ಅಂತಾನೇ 150 ಎಕರೆ ಪ್ರದೇಶದಲ್ಲಿ ಥರಾವರಿ ಗಿಡ ಬೆಳೆಸಲಾಗಿದೆ. ಹಾಗೆ ಬೆಳೆದ ವಿಭಿನ್ನ ಬೆಳೆಗಳು, ಔಷಧಿ ಸಸ್ಯಗಳು, ಫಲಪುಷ್ಪಗಳು ಬಾಡಿ ಹೋಗಿವೆ. ಇನ್ನು, ನಾಲ್ಕೈದು ತಿಂಗಳ ಹಿಂದೆ ನಡೆದ ತೋಟಗಾರಿಕಾ ಮೇಳಕ್ಕೆ ಸಿಎಂ ಕುಮಾರಸ್ವಾಮಿ ಬಂದಿದ್ರು. ಆ ವೇಳೆ ಮಾತನಾಡಿದ್ದ ಅವರು ವಿಶ್ವವಿದ್ಯಾಲಯಕ್ಕೆ ಘಟಪ್ರಭಾ ಹಿನ್ನೀರಿನಿಂದ ಪೈಪ್​ಲೈನ್ ಮೂಲಕ ನೀರು ಸರಬರಾಜು ಮಾಡೋದಾಗಿ ಭರವಸೆ ಕೊಟ್ಟಿದ್ರು. ಅದಕ್ಕಾಗಿ 10 ಕೋಟಿ ರೂಪಾಯಿ ವೆಚ್ಚ ಅನುದಾನ ಮೀಸಲಿಡೋದಾಗಿ ಹೇಳಿದ್ರು. ಸಿಎಂ ಮಾತು ಮಾತಾಗೇ ಉಳೀತು ಅನ್ನೋದು ಇಲ್ಲಿನ ಜನರ ಅಸಮಾಧಾನ  

ನೀರಿನ ವ್ಯವಸ್ಥೆಗೆ ತೋಟಗಾರಿಕೆ ವಿವಿಯಲ್ಲಿ 22 ಬೋರವೆಲ್​​ ಕೊರೆಯಿಸಲಾಗಿದೆ. ಅವುಗಳಲ್ಲಿ 2 ಬೋರವೆಲ್​ನಲ್ಲಿ ಮಾತ್ರ  ಸದ್ಯ ನೀರು ಬರ್ತಿದೆ. ವಿವಿ ಕಚೇರಿ ಮತ್ತು ಸಿಬ್ಬಂದಿಗೆ ಮಾತ್ರ ನೀರು ಸರಬರಾಜು ಆಗ್ತಿದೆ. ತೋಟಗಾರಿಕೆ ಇಲಾಖೆಯ ಆವರಣ ಒಣ ಒಣ ಬಣ ಬಣ ಅನ್ನೋ ಪರಿಸ್ಥಿತಿ ನಿರ್ಮಾಣ ಆಗ್ತಿದೆ. ಇನ್ನಾದ್ರೂ ಸಿಎಂ ಕೊಟ್ಟ ಮಾತು ಈಡೇರಿಸ್ಬೇಕು ಅನ್ನೋದು ಅಧಿಕಾರಿಗಳ ಆಗ್ರಹ.

ಬರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡ್ತಿರೋ ಸಿಎಂ ಕುಮಾರಸ್ವಾಮಿ, ಕುರ್ಚಿ ಉಳಿಸಿಕೊಳ್ಳೋದ್ರಲ್ಲೇ ಬ್ಯುಸಿಯಾಗಿದ್ದಾರೆ. ರೈತ ರೈತ ಅನ್ನೋ ಅವ್ರು, ತೋಟಗಾರಿಕೆ ವಿವಿಯಲ್ಲಿ ಕೊಟ್ಟ ಮಾತನ್ನೇ ಮರೆತಂತಿದೆ. ಮುಳುಗಡೆ ನಾಡಲ್ಲೇ ಈ ಗತಿಯಾದ್ರೆ, ರಾಜ್ಯದ ಉದ್ದಗಲಕ್ಕೂ ಇರೋ ಜನರ ತೋಟಗಳ ಗತಿಯೇನು ಅನ್ನೋದೇ ಪ್ರಶ್ನೆ.

ನಿಜಗುಣ ಮಠಪತಿ , ಬಾಗಲಕೋಟೆ

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments