Home ರಾಜ್ಯ ಬೆಂಗಳೂರು ರಾಜ್ಯದ 13 ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ..!

ರಾಜ್ಯದ 13 ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ..!

ಬೆಂಗಳೂರು: ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ. 19ರಷ್ಟು ಕುಸಿದಿದೆ. ಈ ಪ್ರಮುಖ ಅಣೆಕಟ್ಟುಗಳಲ್ಲಿ ಒಟ್ಟು 155 ಟಿಎಂಸಿ ಎಫ್​ಟಿ ನೀರಷ್ಟೇ ಸಂಗ್ರಹವಿದೆ. ಈ ಜಲಾಶಯಗಳು ಸುಮಾರು 825 ಟಿಎಂಸಿಎಫ್​​ಟಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದ್ದರೂ ಪ್ರಸ್ತುತ ಶೇ.18ರಷ್ಟು ನೀರು ಮಾತ್ರ ಡ್ಯಾಂನಲ್ಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರೀಕ್ಷಣಾ ಕೇಂದ್ರ (ಕೆಎಸ್​ಎನ್​ಡಿಎಂಸಿ) ನಡೆಸಿರುವ ಸಮೀಕ್ಷೆ ಪ್ರಕಾರ ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯ, ಕೊಪ್ಪಳದ ತುಂಗಭದ್ರಾ ಜಲಾಶಯ, ಬೆಳಗಾವಿಯ ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯ ಕುಸಿತ ಕಂಡಿದೆ. ಉತ್ತರ ಕರ್ನಾಟಕದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿತ ಕಾಣುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರೀಕ್ಷಣಾಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.

ಕೆಆರ್ಎಸ್​​ ಜಲಾಶಯದಲ್ಲಿ ಶೇ. 16ರಷ್ಟು ಮಾತ್ರ ನೀರಿದೆ. ಕಬಿನಿಯಲ್ಲಿ  ಶೇ. 23, ಹಾರಂಗಿಯಲ್ಲಿ ಶೇ. 14, ಹೇಮಾವತಿಯಲ್ಲಿ ಶೇ. 10 ಇದೆ. ಉತ್ತರ ಕರ್ನಾಟಕಕ್ಕೆ ಹೋಲಿಸಿದಲ್ಲಿ ದಕ್ಷಿಣ ಕನ್ನಡದಲ್ಲಿ ನೀರಿನ ಪ್ರಮಾಣ ಚೆನ್ನಾಗಿದೆ. ಪ್ರಸ್ತುತ ಕೆಆರ್​ಎಸ್​ನ್ನು ಅವಲಂಬಿಸಿರುವ ಬೆಂಗಳೂರು, ಮಂಡ್ಯ, ಮೈಸೂರುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ ಕೃಷಿ ಅಗತ್ಯಗಳಿಗೆ ನೀರಿನ ಅಭಾವವಿದೆ ಅಂತ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments