Sunday, October 2, 2022
Powertv Logo
Homeಕ್ರೈಂಬ್ರೇಕ್ ಪೆಡಲ್​ಗೆ ಸಿಲುಕಿದ ನೀರಿನ ಬಾಟಲ್; ಸರಣಿ ಅಪಘಾತ

ಬ್ರೇಕ್ ಪೆಡಲ್​ಗೆ ಸಿಲುಕಿದ ನೀರಿನ ಬಾಟಲ್; ಸರಣಿ ಅಪಘಾತ

ಮಂಗಳೂರು: ಮಂಗಳೂರು ನಗರದ ಚಿಲಿಂಬಿ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ಯದ್ವಾತದ್ವಾ ಚಲಿಸಿ ಎರಡು ದ್ವಿಚಕ್ರ ವಾಹನ, ಎರಡು ಕಾರುಗಳಿಗೆ ಡಿಕ್ಕಿಯಾದ ಘಟನೆ ನಗರದ ಉರ್ವಾ ಚಿಲಿಂಬಿ-ಕೋಟೆಕಣಿ ರಸ್ತೆಯಲ್ಲಿ ನಡೆಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಗರದ ನಿವಾಸಿ ವಿವೇಕಾನಂದ ಶೆಣೈ ಎಂಬವರು ಕಾರು ಚಲಾಯಿಸುತ್ತಿದ್ದರು. ಇವರು ಕೋಟೆಕಣಿ ರಸ್ತೆಯಿಂದ ಉರ್ವಾಕ್ಕೆ ಬರುತ್ತಿದ್ದಾಗ ಇಳಿಜಾರಿನಲ್ಲಿ ಬ್ರೇಕ್ ಪೆಡಲ್‌ಗೆ ನೀರಿನ ಬಾಟಲಿ ಸಿಲುಕಿದ ಪರಿಣಾಮ ವಾಹನ ಚಾಲಕ ನಿಯಂತ್ರಣ ತಪ್ಪಿದೆ. ವೇಗವಾಗಿ ಚಲಿಸಿದ ಕಾರು ಲೇಡಿಹಿಲ್‌ನಿಂದ ಉರ್ವಾಸ್ಟೋರ್ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಇಬ್ಬರು ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಆನಂತರವೂ ಕಾರು ಚಾಲಕನ ನಿಯಂತ್ರಣ ಸಿಗದೆ ಮತ್ತೆರಡು ಕಾರುಗಳಿಗೆ ಡಿಕ್ಕಿಯಾಗಿದೆ. ಗಾಯಗೊಂಡ ದ್ವಿಚಕ್ರ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisment -

Most Popular

Recent Comments