Sunday, June 26, 2022
Powertv Logo
Homeರಾಜಕೀಯಅಹಮದಾಬಾದ್​ನಲ್ಲಿ ಮತ ಚಲಾಯಿಸಿದ ಮೋದಿ..!

ಅಹಮದಾಬಾದ್​ನಲ್ಲಿ ಮತ ಚಲಾಯಿಸಿದ ಮೋದಿ..!

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಅಹಮದಾಬಾದ್​​ನ ರಾನಿಪ್​ನಲ್ಲಿ ಮತದಾನದ ಹಕ್ಕು ಚಲಾಯಿಸಿದ್ರು. ಓಪನ್​ ಜೀಪ್​ನಲ್ಲಿ ಬಂದ ಪ್ರಧಾನಿ ನಂತರ ಪಕ್ಷದ ಸಂಗಡಿಗರೊಂದಿಗೆ ನಡೆದುಕೊಂಡು ಬಂದು ಮತಚಲಾಯಿಸಿದ್ದಾರೆ. ಹಾಗೆಯೇ ಎಲ್ಲರೂ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.

ಮತಚಲಾಯಿಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, “ಭಯೋತ್ಪಾದನೆಯ ಆಯುಧ ಐಇಡಿ(ಇಂಪ್ರೂವೈಸ್ಡ್​​​ ಎಕ್ಸ್​​ಪ್ಲೋಸಿವ್​​ ಡಿವೈಸ್​). ಪ್ರಜಾಪ್ರಭುತ್ವದ ಆಯುಧ ವೋಟರ್​ ಐಡಿ. ವೋಟರ್​ ಐಟಿ, ಐಇಡಿಗಿಂತ ಬಹುಪಾಲು ಶಕ್ತಿಶಾಲಿ” ಅಂತ ಹೇಳಿದ್ರು. “ದೇಶದ ಜನರು ಬುದ್ಧಿವಂತರು. ಅವರಿಗೆ ಸರಿ ಯಾವುದು, ತಪ್ಪು ಯಾವುದು ಎಂಬುದು ತಿಳಿದಿದೆ. ಮತ ಚಲಾಯಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗುತ್ತಿದೆ. ಮತದಾನದ ನಂತರ ಕುಂಭಮೇಳದಲ್ಲಿ ಪವಿತ್ರ ನದಿಯಲ್ಲಿ ಮಿಂದು ಎದ್ದಾಗ ಆಗುವಂತಹ ಅದೇ ಸಂತಸವಾಗುತ್ತಿದೆ” ಎಂದಿದ್ದಾರೆ.

ಬುಲೆಟ್​ ಪ್ರೂಫ್​ ವಾಹನದ ಬದಲಾಗಿ ಓಪನ್​ ಜೀಪ್​ನಲ್ಲಿ ಆಗಿಮಿಸಿದ ಪ್ರಧಾನಿ ಮೋದಿ, ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕುಟುಂಬಸ್ಥರನ್ನೂ ಮಾತನಾಡಿಸಿದ್ದಾರೆ. ಮತಗಟ್ಟೆಗೆ ಹೋಗುವ ಮುನ್ನ ಅಮಿತ್​ ಶಾ ಮೊಮ್ಮಗಳನ್ನು ಎತ್ತಿಕೊಂಡು ಮೋದಿ ಜನರತ್ತ ಕೈಬೀಸಿದ್ದಾರೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments