ಕಲಬುರಗಿ: ತಡರಾತ್ರಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರಕ್ಕೆ ಕಿಡಿಗೇಡಿಗಳು ವಾಮಚಾರ ಮಾಡಿದ್ದಾರೆ. ನಿಂಬೆಹಣ್ಣು, ಮೊಟ್ಟೆ ಇಟ್ಟು ಮುಖ್ಯ ದ್ವಾರಕ್ಕೆ ವಾಮಚಾರ ಮಾಡಲಾಗಿದ್ದು, ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಇನ್ನೂ ವಾಮಚಾರ ಕಂಡು ಸಾರ್ವಜನಿಕರು ಭಯಭೀತರಾಗಿದ್ದು, ಭದ್ರತಾಲೋಪದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.