ಉಡುಪಿ : ಪೇಜಾವರ ಮಠದ ಸ್ವಾಮೀಜಿ ವಿಶ್ವೇಶ್ವ ತೀರ್ಥ ಶ್ರೀಗಳು ಕೃಷ್ಣೈಕ್ಯರಾಗಿದ್ದಾರೆ. ನ್ಯುಮೋನಿಯಾ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಡಿಸೆಂಬರ್ 20 ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಪರಿಸ್ಥಿತಿ ತೀರ ಬಿಗುಡಾಯಿಸಿದ್ದರಿಂದ ಶ್ರೀಗಳ ಕೊನೆಯ ಆಸೆಯಂತೆ ಇಂದು ಶ್ರೀಮಠಕ್ಕೆ ಅವರನ್ನುಕರೆತರಲಾಗಿತ್ತು. ಮಠಕ್ಕೆ ಕರೆತಂದ ಕೆಲವೇ ಹೊತ್ತಲ್ಲಿ ಬೃಂದಾವನಸ್ತರಾಗಿದ್ದಾರೆ. ಭಕ್ತಕೋಟಿಯನ್ನು ಅಗಲಿದೆ ಶ್ರೀಗಳ ಕೆಲವು ಅಪರೂಪದ ಫೋಟೋಗಳು ಇಲ್ಲಿವೆ.
ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಗಳು ಬೃಂದಾವನಸ್ತ
ಪೇಜಾವರ ಶ್ರೀಗಳು ಆಶ್ರಮ ಸ್ವೀಕಾರದ ಮುನ್ನ ಮತ್ತು ದೀಕ್ಷೆ ಸ್ವೀಕಾರದ ಬಳಿಕ ತಾರುಣ್ಯದಲ್ಲಿ
ವಿದ್ಯಾ ಗುರುಗಳಾದ ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀ ಪಾದರೊಡನೆ ವೇದಾಂತ ವ್ಯಾಸಂಗದ ಸಮಯದಲ್ಲಿ ವಿಶ್ವೇಶತೀರ್ಥ ಶ್ರೀಗಳು.
ಸನ್ಯಾಸ ಸ್ವೀಕಾರದ ಸಂದರ್ಭ
17 ನೇ ವಯಸ್ಸಲ್ಲಿ ಶ್ರೀಗಳು
18ನೇ ವಯಸ್ಸಲ್ಲಿ ಶ್ರೀಗಳು
ಶ್ರೀ ವಿಶ್ವಮಾನ್ಯತೀರ್ಥರಿಂದ ಹಂಪಿಯಲ್ಲಿ ಸನ್ಯಾಸದೀಕ್ಷೆ ; ಬಾಲ ಸನ್ಯಾಸಿ ಶ್ರೀ ವಿಶ್ವೇಶತೀರ್ಥರು.
ಮೂರನೇ ಪರ್ಯಾಯವನ್ನು ಮುಗಿಸಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಪೇಜಾವರ ಮಠ
ಯೋಗನಿರತ ಶ್ರೀಗಳು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಶ್ವೇಶ್ವ ತೀರ್ಥರಿಂದ ಆಶೀರ್ವಾದ ಪಡೆಯುತ್ತಿರುವುದು
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಶ್ವೇಶ ತೀರ್ಥರು
ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅವರೊಂದಿಗೆ ವಿಶ್ವೇಶ ತೀರ್ಥ ಶ್ರೀಗಳು
ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಅವರೊಂದಿಗೆ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು