ಉಡುಪಿ : ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಕೃಷ್ಣೈಕ್ಯರಾಗಿರುವುದರಿಂದ ಭಕ್ತಗಣ ಶೋಕ ಸಾಗರದಲ್ಲಿ ಮುಳುಗಿದೆ. ನಾಡಿನ ಗಣ್ಯರು ಅಗಲಿದ ‘ದೇವಮಾನವ’ಗೆ ಸಂತಾಪ ಸೂಚಿಸಿದ್ದಾರೆ.
ವಿಶ್ವೇಶ ತೀರ್ಥರು ದೇಶಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ಸಂತರು : ಶೋಭಾ ಕರಂದ್ಲಾಜೆ
ವಿಶ್ವೇಶ ತೀರ್ಥ ಶ್ರೀಗಳ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತರಾಮನ್, ಸುರೇಶ್ ಅಂಗಡಿ, ಸಂಸದರಾದ ರಾಹುಲ್ ಗಾಂಧಿ, ಬಿ.ವೈ ರಾಘವೇಂದ್ರ, ಶೋಭ ಕರಂದ್ಲಾಜೆ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಸಚಿವರಾದ ಸುರೇಶ್ ಕುಮಾರ , ಸಿ ಟಿ ರವಿ, ಬಿ ಶ್ರೀರಾಮುಲು, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ , ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಬೆಂಗಳೂರಿನ ವಿದ್ಯಾಪೀಠದಲ್ಲಿ ಕೃಷ್ಣೈಕ್ಯ ವಿಶ್ವೇಶ ತೀರ್ಥರ ಬೃಂದಾವನ
ವಿಶ್ವೇಶ ತೀರ್ಥ ಶ್ರೀಗಳ ಅಗಲಿಕೆಗೆ ಮೋದಿ ಸಂತಾಪ
Sri Vishvesha Teertha Swamiji of the Sri Pejawara Matha, Udupi will remain in the hearts and minds of lakhs of people for whom he was always a guiding light. A powerhouse of service and spirituality, he continuously worked for a more just and compassionate society. Om Shanti. pic.twitter.com/ReVDvcUD6F
— Narendra Modi (@narendramodi) December 29, 2019
Deeply pained to learn about the demise of Sri Sri Vishwesha Teertha Swami ji of the Pejawar mutt, Udupi. He was an epitome of humanity, kindness and knowledge. His selfless contribution towards the welfare of people and society has no parallels. pic.twitter.com/K25CQx6wwG
— Amit Shah (@AmitShah) December 29, 2019
ಪರಮಪೂಜ್ಯ ಯತಿಗಳಾದ
ಉಡುಪಿಯ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ ನಿಧನವು ನಮಗೆ ಅತೀವ ದುಃಖ ತಂದಿರುತ್ತದೆ. ಭಾರತವು ಇಂದು ದೇಶದ ಅತೀ ಹಿರಿಯ ಸಂತರನ್ನು ಕಳೆದುಕೊಂಡಿದೆ. ಅವರ ಉತ್ತಮವಾದ ಕಾರ್ಯಗಳು ಸಮಾಜದ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿರುತ್ತದೆ. ಓಂ ಶಾಂತಿ pic.twitter.com/X665YvoZlk— Rajnath Singh (@rajnathsingh) December 29, 2019
Heartfelt condolences on the passing away of PujyaShri Vishwesha Teertha Swami ji of Udupi Sri Pejawar Mutt. Immensely blessed to have received his grace on several occasions. A life of dedication to spiritual upliftment and service for social causes. pic.twitter.com/E7cQa7JmmP
— Nirmala Sitharaman (@nsitharaman) December 29, 2019
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಇಂದು ಬೆಳಗ್ಗೆ ಕೃಷ್ಣನಲ್ಲಿ ಲೀನವಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಗಳು.
ಅವರ ಎಲ್ಲ ಭಕ್ತರಿಗೂ ಈ ದುಃಖವನ್ನು ಸಹಿಸುವ ಶಕ್ತಿ ಆ ಶ್ರೀಕೃಷ್ಣ ಕರುಣಿಸಲಿ. pic.twitter.com/vJWX6lkOnE
— Suresh Angadi (@SureshAngadi_) December 29, 2019
I’m sorry to hear of the passing of Sri Vishwesha Teertha Swamiji of Pejawara Matha, Udupi. My condolences to all his followers around the world. Om Shanti 🙏 pic.twitter.com/2kIT9eh7jt
— Rahul Gandhi (@RahulGandhi) December 29, 2019
ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ಕೃಷ್ಣೈಕ್ಯರಾದರು ಎಂಬ ವಿಷಯ ತೀವ್ರ ಆಘಾತವನ್ನುಂಟುಮಾಡಿದೆ. ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದ ಶ್ರೀಗಳ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ.
ಶ್ರೀಗಳ ಭಕ್ತವೃಂದಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/oo9qDCDqdZ— H D Devegowda (@H_D_Devegowda) December 29, 2019
Sri Vishvesha Teertha Swamiji of the Sri Pejawara Matha won the hearts of many people through his philosophical thoughts & honest speaking.
His demise has saddened me & I offer my condolences to all his well-wishers & followers. pic.twitter.com/N9JKnG1b61
— Siddaramaiah (@siddaramaiah) December 29, 2019
ಪರಮಪೂಜ್ಯ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ.
ಸದಾ ಜೀವನೋತ್ಸಾಹದ ಚಿಲುಮೆಯಂತಿದ್ದ ಶ್ರೀ ಗಳು ಸಮಾಜಮುಖಿ ನಿಲುವಿನ ಶ್ರೇಷ್ಠ ಸಂತರಾಗಿದ್ದರು. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿಧನದಿಂದ ನಾಡು ಬಡವಾಗಿದೆ. pic.twitter.com/4hD8cIRirV— H D Kumaraswamy (@hd_kumaraswamy) December 29, 2019
https://t.co/tCIpPGfG7X pic.twitter.com/Lx9SuB7wfG
— S.Suresh Kumar, Minister – Govt of Karnataka (@nimmasuresh) December 29, 2019
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ ಮುಖ್ಯಸ್ಥರು ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಇಹಲೋಕ ಯಾತ್ರೆ ಮುಗಿಸಿ ಶ್ರೀಮನ್ನಾರಾಯಣನ ನೆಲೆ ವೈಕುಂಟಕ್ಕೆ ಹೊರಟಿದ್ದಾರೆ.
ಗುರುಗಳ ಅಗಲಿಕೆಯಲ್ಲಿ ನಾವು ಅನಾಥರಾಗಿದ್ದೇವೆ. ಮುಂದೆ ಬೃಂದಾವನಸ್ಥರಾಗಿ ನಮ್ಮನ್ನೆಲ್ಲ ಆಶೀರ್ವದಿಸುತ್ತಾರೆ ಎಂದು ನಂಬಿದ್ದೇನೆ.
ಹರಿಃ ಓಂ pic.twitter.com/EqKBHcCczY— C T Ravi 🇮🇳 ಸಿ ಟಿ ರವಿ (@CTRavi_BJP) December 29, 2019
ಉಡುಪಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ನಮ್ಮೆಲ್ಲರನ್ನು ಅಗಲಿ ಶ್ರೀಕೃಷ್ಣನಲ್ಲಿ ಐಕ್ಯರಾಗಿದ್ದಾರೆ. ಅವರ ದಿವ್ಯಾತ್ಮಕ್ಕೆ ಶಾಂತಿ ದೊರಕಲಿ.
🙏 ಓಂ ಶಾಂತಿ 🙏 pic.twitter.com/HVw4F4fe0i
— B Y Raghavendra (@BYRBJP) December 29, 2019
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶೀಪಾದಂಗಳ ಕೃಷ್ಣೈಕ್ಯ ನನಗೆ ಅತೀವ ನೋವು ತಂದಿದೆ.
ಪ್ರಖಾಂಡ ತರ್ಕಶಾಸ್ತ್ರಜ್ಞರು, ವೇದ ಪಾರಂಗತರು, ಸರ್ವಧರ್ಮ ಸಮಾನತೆ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದವರು, ಯತಿವರ್ಯರಲ್ಲಿ ಮೇರುಪರ್ವತದತಿದ್ದ ಶ್ರೀಗಳು ಧಾರ್ಮಿಕ ಜಗತ್ತಿಗೆ ನೀಡಿರುವ ಕೊಡುಗೆ ವರ್ಣಾತೀತ pic.twitter.com/HleTeDfjbl
— DK Shivakumar (@DKShivakumar) December 29, 2019
ನಾಡಿನ ಹೆಮ್ಮೆಯ ಸಂತ, ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ದೈವಾಧೀನರಾದ ಸುದ್ದಿ ಕೇಳಿ ನನ್ನ ಮನಸಿಗೆ ತುಂಬಾ ನೋವುಂಟು ಮಾಡಿದೆ.
ತಮ್ಮ 88ನೇ ವಯಸ್ಸಿನಲ್ಲಿಯೂ ದೈವ ಭಕ್ತಿ ಹಾಗೂ ದೀನ ದಲಿತರ ಬಗ್ಗೆ ಕಾಳಜಿ ಹೊಂದಿರುವ ಮಹಾನ್ ಸಂತರು. (1/2) pic.twitter.com/U4TxHsKWMF— GT Devegowda (@GTDevegowda) December 29, 2019
ಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳ ಅಪರೂಪದ ಫೋಟೋಗಳು