ಬೆಂಗಳೂರು: ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯ ಮೇರು ನಟ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೆಡಿಗಳು ಧ್ವಂಸಗೊಳಿಸಿದ್ದಾರೆ. ಕೃತ್ಯ ಖಂಡಿಸಿ ಟೋಲ್ ಗೇಟ್ ಬಳಿ ಅಭಿಮಾನಿಗಳಿಂದ ಪ್ರತಿಭಟನೆ.
ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಇರುವ ನಟ ವಿಷ್ಣುವರ್ಧನ್ ಪ್ರತಿಮೆಯನ್ನು ಕಿಡಿಗೆಡಿಗಳು ಎರಡನೇ ಬಾರಿಗೆ ಧ್ವಂಸಗೊಳಿಸುತ್ತಿದ್ದಾರೆ. ಆದರೆ ಅದಕ್ಕೆ ಈ ಹಿಂದೆ ಬಾಲಗಂಗಾಧರ ಸ್ವಾಮಿ ವೃತ್ತ ಅಂತ ಕರಿಯಬೇಕು ಅಂತ ಕೇಲವರ ವಾದ ಆಗಿತ್ತು. ಈ ಹಿಂದೆ ಸ್ವಾಮೀಜಿ ಪ್ರತಿಮೆ ಸ್ಥಾಪಿಸುವುದಾಗಿ ನಿರ್ಧಾರವಾಗಿತ್ತು. ಆದರೆ ಒಂದುವರೆ ವರ್ಷದ ಹಿಂದೆ ಇಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ವಿಷ್ಣುವರ್ಧನ್ ಪ್ರತಿಮೆ ಸ್ಥಳಾಂತರಕ್ಕೂ ಮುನ್ನ ಕಿಡಿಗೇಡಿಗಳು ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಕೃತ್ಯ ಖಂಡಿಸಿ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃತ್ಯ ಖಂಡಿಸಿ ಮಾಗಡಿ ಟೋಲ್ ಗೇಟ್ ಬಳಿ ಪ್ರತಿಭಟನೆ.