ಪ್ಯಾನ್ ಇಂಡಿಯಾ ವಿಷನ್ನಲ್ಲಿ ಸದ್ಯ ರಾಕಿಭಾಯ್ ಯಶ್, ಟಾಕ್ ಆಫ್ ದ ಟೌನ್ ಆಗಿರಬಹುದು. ಆದ್ರೆ ಕನ್ನಡದ ರಿಯಲ್ ಪ್ಯಾನ್ ಇಂಡಿಯಾ ಸ್ಟಾರ್ಸ್ ಅಭಿನಯ ಭಾರ್ಗವ ವಿಷ್ಣುದಾದಾ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಜಮಾನದಲ್ಲೇ ಇವ್ರು ಕನ್ನಡದ ಕೀರ್ತಿ ಪತಾಕೆಯನ್ನ ಪರಭಾಷೆಗಳಲ್ಲಿ ಹಾರಿಸಿದ್ರು.
ತಂತ್ರಜ್ಞಾನ ಬೆಳೆದಂತೆ ಫಿಲ್ಮ್ ಮೇಕಿಂಗ್ ಶೈಲಿಯೂ ಬದಲಾಯ್ತು. ವೈಟ್ ಅಂಡ್ ಬ್ಲ್ಯಾಕ್ನಿಂದ ಕಲರ್. ರೀಲ್ನಿಂದ ಡಿಜಿಟಲ್. ಮೂಕಿ ಚಿತ್ರಗಳಿಂದ ಟಾಕಿ ಚಿತ್ರಗಳು. ಹೀಗೆ ಹಂತ ಹಂತವಾಗಿ ಚಿತ್ರರಂಗ ಅಪ್ಡೇಟ್ ಆಗ್ತಾ ಹೋಗ್ತಿದೆ. ಆದ್ರೆ ಮಾಸ್ಟರ್ಪೀಸ್ ಸಿನಿಮಾಗಳು, ಅವುಗಳಿಗಾಗಿ ದುಡಿದ ಚೇತನಗಳು, ತಂತ್ರಜ್ಞರು ಹಾಗೂ ಕಲಾವಿದರು ಮಾಡಿದ ಇತಿಹಾಸ ಮಾತ್ರ ಶಾಶ್ವತ.
ಕೆಜಿಎಫ್ ಚಿತ್ರ ಇಂದು ಕನ್ನಡಿಗರ ಹೆಮ್ಮೆ. ಅದರಲ್ಲಿ ಎರಡು ಮಾತಿಲ್ಲ. ಹಾಗಂತ ಯಾರೂ ಮಾಡದಂತಹ ಸಾಹಸಗಳೇನೂ ಮಾಡಿಲ್ಲ ಯಶ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಸಾಹಸಸಿಂಹ ಡಾ. ವಿಷ್ಣುವರ್ಧನ್. ಇವ್ರ ಅಭಿನಯ ಚತುರತೆಗೆ ಇಡೀ ಇಂಡಿಯಾನೇ ಬೋಲ್ಡ್ ಆಗಿತ್ತು. 70ರ ದಶಕದಿಂದ ಸಾಲು ಸಾಲು ಸಿನಿಮಾಗಳಲ್ಲಿ ದಾದಾ ಮಿಂಚು ಹರಿಸಿದ್ರು.
ಅತಿಹೆಚ್ಚು ದ್ವಿಪಾತ್ರ ಹಾಗೂ ತ್ರಿಪಾತ್ರಗಳ ಚಿತ್ರಗಳಲ್ಲಿ ನಟಿಸಿದ ಗರಿಮೆ ವಿಷ್ಣು ಅವ್ರಿಗೆ ಸಲ್ಲುತ್ತೆ. ಅದ್ರಲ್ಲೂ 1991ರಲ್ಲೇ ಪೊಲೀಸ್ ಮತ್ತು ದಾದಾ ಅನ್ನೋ ಸಿನಿಮಾ ಕನ್ನಡದ ಜೊತೆ ಇನ್ಸ್ಪೆಕ್ಟರ್ ಧನುಷ್ ಟೈಟಲ್ನಲ್ಲಿ ಹಿಂದಿಯಲ್ಲೂ ಚಿತ್ರಿತವಾಗುತ್ತೆ. 1993ರಲ್ಲಿ ತೆರೆಕಂಡ ವಿಷ್ಣುವರ್ಧನ್- ಅಕ್ಷಯ್ ಕುಮಾರ್ ಜೋಡಿಯ ವಿಷ್ಣು ವಿಜಯ ಸಿನಿಮಾ ಕನ್ನಡದ ಜೊತೆ ಬಾಲಿವುಡ್ನಲ್ಲಿ ಅಶಾಂತ್ ಹೆಸರಲ್ಲಿ ತಯಾರಾಗಿ ಎಲ್ಲರ ಹುಬ್ಬೇರಿಸುತ್ತೆ.
ಇಂದು ಕೆಜಿಎಫ್ ಚಿತ್ರಕ್ಕಾಗಿ ನಮ್ಮ ಯಶ್ ದೇಶಾದ್ಯಂತ ಅವರವರ ಭಾಷೆಯಲ್ಲಿ ಮಾತನಾಡ್ತಾ ನಮ್ಮ ಕನ್ನಡದ ರಾಯಭಾರಿ ಆಗಿ ರಾರಾಜಿಸೋದನ್ನ ನೋಡಿದ್ರೆ ವ್ಹಾವ್ ಅನಿಸುತ್ತೆ. ಇದನ್ನ ಮೂರು ದಶಕದ ಹಿಂದೆ ವಿಷ್ಣುವರ್ಧನದ್ ಮಾಡಿದ್ರು ಅನ್ನೋದನ್ನ ಮರೆಯೋ ಹಾಗಿಲ್ಲ. ಹೌದು.. ತಾವು ನಟಿಸಿದ ಹಿಂದಿ ಚಿತ್ರಗಳಿಗೆ ಅವರೇ ವಾಯ್ಸ್ ಡಬ್ ಮಾಡಿದ್ದು ವಿಶೇಷ. ಕಲೆ ಅನ್ನೋದು ಕಲೆ ಅಷ್ಟೇ. ಅದಕ್ಕೆ ಸೌತ್, ನಾರ್ಥ್ ಅನ್ನೋದೇನಿಲ್ಲ. ನಾನು ನಮ್ಮ ಕನ್ನಡದ ಭಾವುಟವನ್ನು ಹಿಡಿದು ಬಂದಿದ್ದೇನೆ ಅಂತ ಹೆಮ್ಮೆಯಿಂದ ಹಿಂದಿ ಸಂದರ್ಶನದಲ್ಲಿ ಹಿಂದಿಯಲ್ಲೇ ಹೇಳಿಕೊಂಡಿದ್ರು.
ಇನ್ನು ಅಕ್ಷಯ್ ಕುಮಾರ್ ಕೂಡ ಒಂದು ಸಂದರ್ಶನದಲ್ಲಿ ಶ್ರುತಿ ಹಾಸನ್ ಜೊತೆ ಕೂತು ಮಾತನಾಡೋವಾಗ ನಾನು ವಿಷ್ಣುವರ್ಧನ್ ಅವ್ರ ಜೊತೆ ವಿಷ್ಣು ವಿಜಯ ಅನ್ನೋ ಕನ್ನಡ ಸಿನಿಮಾ ಮಾಡಿದ್ದೆ ಅನ್ನೋದನ್ನ ಬಹಿರಂವಾಗಿ ಹೇಳಿಕೊಂಡಿದ್ರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಕನ್ನಡದ ಭಾವುಟವನ್ನ ಮತ್ತಷ್ಟು ಉತ್ತುಂಗದಲ್ಲಿ ಹಾರಿಸಿದವರೇ ಅನ್ನೋದು ಮರೆಯೋ ಹಾಗಿಲ್ಲ. ವಿಷ್ಣುದಾದಾರ ಬಳಿಕ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸೋ ಮೂಲಕ ನಮ್ಮ ಕನ್ನಡಿಗರ ಗತ್ತು, ಗಮ್ಮತ್ತು ದೇಶಕ್ಕೆ ತೋರಿಸಿಕೊಟ್ಟರು.
ರಾಮ್ ಗೋಪಾಲ್ ವರ್ಮಾರ ರಕ್ತ ಚರಿತ್ರ, ರಾಜಮೌಳಿಯ ಈಗ- ಬಾಹುಬಲಿ ಸಿನಿಮಾಗಳಿಂದ ಪ್ರಶಂಸೆ ಗಳಿಸಿದ್ರು. ಬಿಗ್ ಬಿ ಅಮಿತಾಬ್ರಂತಹ ಲಿವಿಂಗ್ ಲೆಜೆಂಡ್ ಜೊತೆ ತೆರೆಹಂಚಿಕೊಂಡರು. ಮೆಗಾಸ್ಟಾರ್ ಚಿರಂಜೀವಿ, ದಳಪತಿ ವಿಜಯ್, ಶ್ರೀದೇವಿ ಅಂತಹ ಗ್ರೇಟ್ ಌಕ್ಟರ್ಗಳೊಟ್ಟಿಗೆ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡು ಕನ್ನಡಿಗರ ಗರಿಮೆ ಹೆಚ್ಚಿಸಿದರು. ಅಷ್ಟೇ ಯಾಕೆ ಸಲ್ಮಾನ್ ಖಾನ್ ಜೊತೆಗೂ ಮಿಂಚಿದ ಕೀರ್ತಿ ಕಿಚ್ಚನದ್ದು.
ಸುದೀಪ್ ಸಾಕಷ್ಟು ದುಇನಗಳ ಹಿಂದೆಯೇ ತಮಿಳು, ತೆಲುಗು ಹಾಗೂ ಹಿಂದಿ ಸಂದರ್ಶನಗಳಲ್ಲಿ ಅಲ್ಲಿನ ಭಾಷೆಯಲ್ಲೇ ಮಾತನಾಡೋ ಮೂಲಕ ಅಕ್ಷರಶಃ ಆಲ್ ಇಂಡಿಯಾ ಕಟೌಟ್ ಆಗಿ ಧೂಳೆಬ್ಬಿಸಿದ್ರು. ಅರ್ಥಾತ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಎಲ್ಲರ ಮನಸ್ಸು ಗೆದ್ದಿದ್ರು, ಕನ್ನಡಾಂಬೆಯ ಘನತೆ, ಗೌರವ ಹೆಚ್ಚಿಸಿದ್ರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ