ಅಮೆರಿಕದಲ್ಲಿ ಗುಂಡಿನ ದಾಳಿಗೆ 12 ಮಂದಿ ಬಲಿ ..!

0
29

ಅಮೆರಿಕದ ವರ್ಜೀನಿಯಾ ಬೀಚ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 12 ಮಂದಿ ಮೃತ ಪಟ್ಟಿದ್ದಾರೆ. 6 ಜನರು ತೀವ್ರ ಗಾಯಗೊಂಡಿದ್ದಾರೆ.

ವರ್ಜೀನಿಯಾದ ಮುನ್ಸಿಪಲ್ ಸೆಂಟರ್ ಕಟ್ಟಡದಲ್ಲಿಈ ಘಟನೆ ನಡೆದಿದೆ. ಘಟನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ಜೀನಿಯಾ ಬೀಚ್ ಪೊಲೀಸ್ ಮುಖ್ಯಸ್ಥ ಜೇಮ್ಸ್ ಕೆರ್ವೆರಾ, ಶಂಕಿತ ಆರೋಪಿಯು ಘಟನೆ ವೇಳೆ ಮೃತಪಟ್ಟಿದ್ದಾನೆ. ಈತ ಪಬ್ಲಿಕ್ ಯುಟಿಲಿಟಿ ಇಲಾಖೆಯಲ್ಲಿ ದೀರ್ಘಕಾಲದ ನೌಕರರಾಗಿದ್ದನು ಎಂದು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೂ ಸೇರಿದಂತೆ 6 ಮಂದಿ ಗಾಯಗೊಂಡಿದ್ದು ಗಾಯಗೊಂಡವರನ್ನು ವರ್ಜೀನಿಯಾ ಬೀಚ್ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯೂ ವರ್ಜೀನಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತವಾಗಿದ್ದು, ಇದೊಂದು ಕರಾಳ ದಿನವಾಗಿದೆ ಎಂದು ಮೇಯರ್ ಬಾಬಿ ಡೈಯರ್ ಬೇಸರ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here