ಬಂಗಾಳ ಸಿಎಂ ಆಗ್ತಾರಾ ಸೌರವ್ ಗಂಗೂಲಿ – ಇದು ಸೆಹ್ವಾಗ್ ಎರಡನೇ ಭವಿಷ್ಯ!

0
301

ಬಿಸಿಸಿಐನ ನೂತನ ಅಧ್ಯಕ್ಷ ಸೌರವ್ ಗಂಗೂಲಿ 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿದ್ದಾರೆ. ಇದಕ್ಕೆ ಈ ಹಿಂದೆ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ನುಡಿದಿದ್ದ ಭವಿಷ್ಯ ಬಲ ತುಂಬಿದೆ! ಯಾಕಂದ್ರೆ ಅಂದು ವೀರೂ ಹೇಳಿದ್ದ ಒಂದು ಭವಿಷ್ಯ ಇಂದು ನಿಜವಾಗಿದೆ. ಎರಡನೇ ಭವಿಷ್ಯ ಗಂಗೂಲಿ ಬಂಗಾಳ ಸಿಎಂ ಆಗ್ತಾರೆ ಅನ್ನೋದು!
ಹೌದು,” ದಾದಾ, ಬಿಸಿಸಿಐ ಅಧ್ಯಕ್ಷರಾಗ್ತಾರೆ ಅಂತ ಕೇಳಿದಾಕ್ಷಣವೇ ನನಗೆ ನೆನಪಾಗಿದ್ದು 2007ರ ದಕ್ಷಿಣ ಆಫ್ರಿಕಾ ಪ್ರವಾಸ. ಅಂದು ಕೇಪ್​ಟೌನ್​ನಲ್ಲಿ ನಡೆಯುತ್ತಿದ್ದ ಟೆಸ್ಟ್ ಮ್ಯಾಚಲ್ಲಿ ನಾನು ಹಾಗೂ ವಾಸೀಮ್ ಜಾಫರ್ ಬೇಗನೇ ಔಟ್ ಆಗಿದ್ವಿ. 4ನೇ ಕ್ರಮಾಂಕದಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮಾಡ್ಬೇಕಿತ್ತು. ಆದ್ರೆ, ಸಚಿನ್ ಬದಲಿಗೆ ಸೌರವ್​ ಗಂಗೂಲಿಗೆ ಬ್ಯಾಟಿಂಗ್​ಗೆ ಇಳಿಯಲು ಟೀಂ ಮ್ಯಾನೇಜ್​ಮೆಂಟ್ ತಿಳಿಸಿತು. ಅದು ಗಂಗೂಲಿಗೆ ಕಮ್​ಬ್ಯಾಕ್ ಸೀರಿಸ್ ಆಗಿತ್ತು. ಅವರ ಮೇಲೆ ಸಾಕಷ್ಟು ಒತ್ತಡ ಇತ್ತು. ಆದ್ರೆ, ಅವೆಲ್ಲವನ್ನೂ ಮೀರಿ ಅವರು ಒತ್ತಡವನ್ನು ನಿಭಾಯಿಸಿದ್ದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಕೇವಲ ಅವರಿಂದ ಮಾತ್ರ ಇದೆಲ್ಲವೂ ಸಾಧ್ಯ ಎಂದೆನಿಸಿತು. ಅಂದೇ ನಾವೆಲ್ಲರೂ ಡ್ರೆಸ್ಸಿಂಗ್​ ರೂಂನಲ್ಲಿ ಮಾತಾಡಿಕೊಂಡಿದ್ದೆವು. ಮುಂದೊಂದು ದಿನ ನಮ್ಮಲ್ಲಿ ಯಾರಾದ್ರೂ ಬಿಸಿಸಿಐ ಅಧ್ಯಕ್ಷರಾದ್ರೆ ಸೌರವ್ ಗಂಗೂಲಿ ಮಾತ್ರ ಎಂದಿದ್ದೆ. ಅಲ್ಲದೆ ಗಂಗೂಲಿ ಮುಂದೊಂದು ದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗ್ತಾರೆ ಎಂದು ನಾನು ಹೇಳಿದ್ದೆ. ನನ್ನ ಒಂದು ಭವಿಷ್ಯವಾಣಿ ಈಗ ನಿಜವಾಗಿದೆ. ಮತ್ತೊಂದು ಭವಿಷ್ಯವಾಣಿ ಬಾಕಿಯಿದೆ’’ ಎಂದು ಸೆಹ್ವಾಗ್ ಹೇಳಿದ್ದಾರೆ.
ವೀರೂ ಹೇಳಿದ ಒಂದು ಭವಿಷ್ಯ ನಿಜವಾಗಿದ್ದು, ಎರಡನೇ ಭವಿಷ್ಯ ನಿಜವಾಗುತ್ತಾ? ಗಂಗೂಲಿ ಬಂಗಾಳದ ಸಿಎಂ ಆಗ್ತಾರಾ ಅನ್ನೋದು ಕುತೂಹಲ.

LEAVE A REPLY

Please enter your comment!
Please enter your name here