Tuesday, January 18, 2022
Powertv Logo
Homeವಿದೇಶವಿರಾಟ್ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಿದ ರೋಹಿತ್ ಶರ್ಮಾ..!

ವಿರಾಟ್ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಿದ ರೋಹಿತ್ ಶರ್ಮಾ..!

ಟೀಮ್ ಇಂಡಿಯಾದ ಖಾಯಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವ್ರ ರೆಕಾರ್ಡ್ ಸೇರಿದಂತೆ ಕ್ರಿಕೆಟ್ ನ ಬಹುತೇಕ ರೆಕಾರ್ಡ್ ಗಳನ್ನು ಮುರಿಯುತ್ತಿದ್ದಾರೆ. ಪ್ರತಿ ಮ್ಯಾಚ್ ನಲ್ಲೂ ಒಂದಲ್ಲ ಒಂದು ರೆಕಾರ್ಡ್ ಮಾಡೋ ಕೊಹ್ಲಿಯ ರೆಕಾರ್ಡನ್ನೇ ರೋಹಿತ್ ಶರ್ಮಾ ಮುರಿದಿದ್ದಾರೆ.
ಟೀ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಮಂಗಳವಾರ ನಡೆದ 2ನೇ ಟಿ20 ಮ್ಯಾಚ್ ನಲ್ಲಿ ಗೆದ್ದಿದೆ. ಇದ್ರಿಂದ ಟೆಸ್ಟ್, ಒಡಿಐ ಹಾಗೂ ಟಿ20 ಸರಣಿಯನ್ನೂ ಕೂಡ ಇಂಡಿಯಾ ತನ್ನದಾಗಿಸಿಕೊಂಡಂತಾಗಿದೆ.
ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ ನಲ್ಲಿ ಭಾರತ 71 ರನ್ ಗಳಿಂದ ಗೆಲುವು ಸಾಧಿಸಿದೆ.1 ಮ್ಯಾಚ್ ಬಾಕಿ ಇರುವಂತೆಯೇ ರೋಹಿತ್ ಪಡೆ ಸರಣಿ ಗೆದ್ದಿದೆ. ಖಾಯಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿರೋ ಡಬಲ್ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಈ ಮ್ಯಾಚ್ ನಲ್ಲಿ 3 ರೆಕಾರ್ಡ್ ಗಳನ್ನು ಮಾಡಿದ್ರು. ಓಪನರ್ ಶಿಖರ್ ಧವನ್ 1 ಸಾವಿರ ರನ್ ಪೂರೈಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದ್ರು.

ಟಿ-20 ಮಾದರಿಯಲ್ಲಿ 4ನೇ ಶತಕ ಸಿಡಿಸಿ ಹಿಟ್​ಮ್ಯಾನ್ ದಾಖಲೆ : 61 ಬಾಲ್ ಗಳಲ್ಲಿ 111ರನ್​ ಪೂರೈಸಿದ ಕ್ಯಾಪ್ಟನ್ ರೋಹಿತ್​ ಶರ್ಮಾ ಟಿ20ಕ್ರಿಕೆಟ್ ನಲ್ಲಿ 4ನೇ ಸೆಂಚುರಿ ಪೂರೈಸಿದ್ರು. ಇಷ್ಟೇ ಅಲ್ಲ. ಈ ಸೆಂಚುರಿಯೊಂದಿಗೆ ​​ ಇಂಟರ್ ನ್ಯಾಷನಲ್ ಟಿ20ಯಲ್ಲಿ 4ನೇ ಶತಕ ಸಿಡಿಸದ್ರು. ಇದ್ರೊಂದಿಗೆ ಇಂಟರ್​ನ್ಯಾಷನಲ್​ ಟಿ20 ಮಾದರಿಯಲ್ಲಿ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ರು. 3 ಶತಕಗಳೊಂದಿಗೆ ನ್ಯೂಜಿಲೆಂಡ್​​ನ ಕಾಲಿನ್​ ಮನ್ರೂ 2ನೇ ಸ್ಥಾನದಲ್ಲಿದ್ದಾರೆ.

ವಿರಾಟ್​ ದಾಖಲೆ ಹಿಂದಿಕ್ಕಿದ ರೋ‘ಹಿಟ್’ : ಟಿ-20 ಮಾದರಿಯಲ್ಲಿ 86 ಪಂದ್ಯಗಳಿಂದ 2,203 ರನ್ ಕಲೆಹಾಕಿದ ಸಾಧನೆಯನ್ನೂ ರೋಹಿತ್​ ಮಾಡಿದ್ರು. ಈ ಮೂಲಕ ವಿರಾಟ್​​ ಕೊಹ್ಲಿಯನ್ನ ಹಿಂದಿಕ್ಕಿ ಟಿ-20 ಮಾದರಿಯಲ್ಲಿ ಹೆಚ್ಚು ರನ್​ಗಳಿಸಿದ ಭಾರತೀಯ ಬ್ಯಾಟ್ಸ್​ಮನ್​ ಅನ್ನೋ ಹೆಗ್ಗಳಿಕೆಗೂ ಪಾತ್ರರಾದ್ರು. ಸದ್ಯ ವಿಶ್ರಾಂತಿಯಲ್ಲಿರೋ ಕೊಹ್ಲಿ ಟಿ-20 ಮಾದರಿಯಲ್ಲಿ 62 ಪಂದ್ಯಗಳಿಂದ 2,102 ರನ್​ಗಳಿಸಿದ್ದಾರೆ.

ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ : ಐಪಿಎಲ್ ನ ಯಶಸ್ವಿ ನಾಯಕರಾಗಿರೋ ರೋಹಿತ್ ಶರ್ಮಾ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲೂ ಯಶಸ್ವಿ ಕ್ಯಾಪ್ಟನ್ ಆಗಿದ್ದಾರೆ. ಏಷ್ಯಾಕಪ್, ನಿದಹಾಸ್ ಟ್ರೋಫಿ ಗೆದ್ದು ಕೊಟ್ಟಿರೋ ರೋಹಿತ್ ಶರ್ಮಾ ಇದುವರೆಗೆ 8 ಒಡಿಐ ಹಾಗೂ 11 ಟಿ20 ಮ್ಯಾಚ್ ಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಒಟ್ಟು 19 ಮ್ಯಾಚ್ ಗಳಲ್ಲಿ ಸೋತಿದ್ದು ಎರಡು ಮ್ಯಾಚ್ ಗಳನ್ನು ಮಾತ್ರ. ನಿನ್ನೆಯ ಮ್ಯಾಚ್ ನ ಗೆಲುವಿನೊಂದಿಗೆ ಒಡಿಐ ಮತ್ತು ಟಿ20ಯ ಸತತ 11 ಮ್ಯಾಚ್ ಗಳಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಗೆದ್ದಿದೆ.

ಟಿ-20 ಫಾರ್ಮ್ಯಾಟ್​ನಲ್ಲಿ ‘ಗಬ್ಬರ್’ ಈಗ ಸಾವಿರ ರನ್​ಗಳ ಸರದಾರ : 
ವಿಂಡೀಸ್​ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ 43 ರನ್​ಗಳಿಸಿದ ಶಿಖರ್​ಧವನ್ ಟಿ20 ಕ್ರಿಕೆಟ್ ನಲ್ಲಿ 1,00ರನ್​ ಪೂರೈಸಿದ್ರು. ಈ ಮೂಲಕ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಾವಿರ ರನ್​ ಪೂರೈಸಿದ 6ನೇ ಭಾರತೀಯ ಬ್ಯಾಟ್ಸ್​ಮನ್​ ಅನ್ನೋ ಹೆಗ್ಗಳಿಕೆಗೆ ಧವನ್​ ಪಾತ್ರರಾದ್ರು.

ಇನ್ನು,ಹಿಟ್ ಮ್ಯಾನ್ ರೋಹಿತ್ ಟೀಮ್ ನೀಡಿದ್ದ 196 ರನ್ ಟಾರ್ಗೆಟ್​ ತಲುಪಲು ಕೆರಿಬಿಯನ್​ ಬಳಗ ವಿಫಲವಾಯ್ತು. ಭಾರತೀಯ ಬೌಲರ್​ಗಳ ದಾಳಿಗೆ ತತ್ತರಿಸಿದ ವಿಂಡೀಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳ್ಕೊಂಡು 124 ರನ್ ಗಳನ್ನಷ್ಟೇ ಕಲೆಹಾಕಿ ಸೋಲಪ್ಪಿಕೊಂಡಿತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments