ವಿರಾಟ್​ಗೆ ಭಾರತದ ಮಣ್ಣು ಕಳುಹಿಸಿ ಕೊಟ್ಟ ವಿಶಾಲ್ ಭಾರತಿ..!

0
113

ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅವರಿಗೆ ದೆಹಲಿಯ ಉತ್ತಮ್​ ನಗರದಲ್ಲಿರುವ ವಿಶಾಲ್ ಭಾರತಿ ಪಬ್ಲಿಕ್​​ ಶಾಲೆ ಭಾರತದ ಮಣ್ಣನ್ನು ಕಳುಹಿಸಿಕೊಟ್ಟಿದೆ..!
ವಿರಾಟ್​ ಕೊಹ್ಲಿ ವಿಶಾಲ್ ಭಾರತಿ ಶಾಲೆಯ ಹಳೆಯ ವಿದ್ಯಾರ್ಥಿ. ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿರಾಟ್ ಇಂದು ಇಂಗ್ಲೆಂಡ್​ ನೆಲದಲ್ಲಿ, ಅದರಲ್ಲೂ ವರ್ಲ್ಡ್​ಕಪ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ವಿಚಾರ ಅಂತ ಭಾರತದ ಮಣ್ಣನ್ನು ಕಳುಹಿಸಿ ಕೊಡೋ ಮೂಲಕ ವಿಶಿಷ್ಟ ಬೆಂಬಲ ಸೂಚಿಸಿದೆ.
ಕೊಹ್ಲಿ ಭಾರತಕ್ಕೆ ಮೂರನೇ ವರ್ಲ್ಡ್​​ಕಪ್​ ತರಲಿ ಅಂತ ಶುಭ ಹಾರೈಸಿ ಪ ವಿಶಾಲ್​ ಭಾರತಿ ಶಾಲೆ ತನ್ನ ಶಾಲಾ ಆವರಣದ ಮಣ್ಣನ್ನು ಪ್ರೀತಿಯಿಂದ ವಿರಾಟ್​ಗೆ ಕಳುಹಿಸಿಕೊಟ್ಟಿದೆ ಅಂತ ವರದಿಯಾಗಿದೆ.
ವಿರಾಟ್​ ಕೊಹ್ಲಿ ವಿಶಾಲ್ ಭಾರತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಡೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದ್ದರು. ಅಲ್ಲಿಂದ ಇವತ್ತು ಟೀಮ್ ಇಂಡಿಯಾದ ನಾಯಕನಾಗುವ, ವಿಶ್ವದ ನಂಬರ್ 1 ಪ್ಲೇಯರ್ ಆಗಿ ಬೆಳೆದು ನಿಂತಿದ್ದಾರೆ.

LEAVE A REPLY

Please enter your comment!
Please enter your name here