Monday, August 15, 2022
Powertv Logo
Homeವಿದೇಶಹಾಯ್​ ಚಿಕ್ಕೂ ...15 ವರ್ಷದ ತನಗೆ ತಾನೇ ಪತ್ರ ಬರೆದುಕೊಂಡ ಬರ್ತ್​​ಡೇ ಬಾಯ್ ಕೊಹ್ಲಿ!

ಹಾಯ್​ ಚಿಕ್ಕೂ …15 ವರ್ಷದ ತನಗೆ ತಾನೇ ಪತ್ರ ಬರೆದುಕೊಂಡ ಬರ್ತ್​​ಡೇ ಬಾಯ್ ಕೊಹ್ಲಿ!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆ 15 ವರ್ಷದ ತನಗೆ ತಾನೇ ಕೊಹ್ಲಿ ಪತ್ರವೊಂದನ್ನು ಬರೆದುಕೊಂಡಿದ್ದಾರೆ. ಅರೆ, ಕೊಹ್ಲಿಗೆ 31 ವರ್ಷ.. ಅದು ನೀವೂ ಕೂಡ ಹೇಳಿದ್ದೀರಿ. ನೆಕ್ಸ್ಟ್ ಸೆಂಟೆನ್ಸಲ್ಲಿ 15 ವರ್ಷದ ಕೊಹ್ಲಿ ಅಂತೀರಿ! ಇದೇನಿದು ನೀವು ಕನ್ಫ್ಯೂಸ್ ಆಗಿ ನಮ್ಮನ್ನೂ ಕನ್ಫ್ಯೂಸ್ ಮಾಡ್ತಿದ್ದೀರಾ ಅಂತ ಕೇಳ್ತಿದ್ದೀರಾ..? ಅಷ್ಟೆಲ್ಲಾ ಯೋಚ್ನೆ ಮಾಡೋಕೆ ಹೋಗ್ಬೇಡಿ.. ವಿಷ್ಯ ಏನಪ್ಪ ಅಂದ್ರೆ ವಿರಾಟ್ 31ರ ಹುಟ್ಟುಹಬ್ಬದ ಸಂಭ್ರಮದಲ್ಲಿ ತನ್ನ 15 ವರ್ಷದ ಕ್ರಿಕೆಟ್ ಜರ್ನಿ ಬಗ್ಗೆ ತಮಗೆ ತಾವೇ ಪತ್ರ ಬರೆದುಕೊಂಡು,ಅದನ್ನು ಟ್ವೀಟ್ ಮಾಡಿದ್ದಾರೆ. ಆ ಪತ್ರವೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ವಿರಾಟ್ ತಮಗೆ ತಾವೇ ಬರೆದುಕೊಂಡ ಪತ್ರದಲ್ಲಿ ಏನಿದೆ?
``ಹಾಯ್ ಚಿಕ್ಕೂ
ಮೊದಲಿಗೆ ನಿಂಗೆ ಜನ್ಮದಿನದ ಶುಭಾಶಯಗಳು. ನಂಗೆ ಗೊತ್ತು ನಿನ್ನ ಭವಿಷ್ಯ ಬಗ್ಗೆ ನನ್ನ ಬಳಿ ಕೇಳಿಕೊಳ್ಳಲು ಸಾಕಷ್ಟು ಪ್ರಶ್ನೆಗಳಿವೆ ಅಂತ. ಕ್ಷಮಿಸು, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನೀನು ಇಲ್ಲಿವರೆಗೆ ನಡೆದುಬಂದ ಹಾದಿಯಲ್ಲಿ ಎದುರಿಸಿರೋ ಬೇಸರದ ಸಂಗತಿಗಳು ನಿಂಗೆ ಹೊಸ ಕಲಿಕೆಗೆ ಅವಕಾಶಗಳನ್ನು ಮಾಡಿಕೊಟ್ಟಿವೆ. ಈಗ ಆ ಹಿಂದಿನ ಎಲ್ಲಾ ಘಟನೆಗಳನ್ನು ನೆನೆಪಿಸಿಕೊಂಡಾಗ ತುಂಬಾ ಸಂತೋಷವೆನಿಸಬಹುದು.
ಜೀವನ ಅನ್ನೋದು ದೊಡ್ಡ ಸಂಗತಿಗಳನ್ನು ಒಳಗೊಂಡಿರುತ್ತೆ. ಆದ್ರೆ, ನಿನ್ನ ದಾರಿಯಲ್ಲಿ ಬರೋ ಪ್ರತಿಯೊಂದು ಅವಕಾಶಕ್ಕೂ ನೀನು ರೆಡಿಯಾಗಿರ್ಬೇಕು. ಯಾವ್ದನ್ನೂ ಕೂಡ ಹಗರುವಾಗಿ ತೆಗೆದುಕೊಳ್ಬೇಡ. ಕೆಲವೊಮ್ಮೆ ಅವುಗಳನ್ನು ಪಡೆದುಕೊಳ್ಳಲು ಆಗದೇ ಇರಬಹುದು. ನಿನ್ನ ಮೇಲೆ ನಿಂಗೆ ಭರವಸೆ ಇರ್ಲಿ. ಇಲ್ಲಿವರೆಗೆ ನೀನು ಪ್ರಯತ್ನ ಪಡದಿದ್ರೆ ಈಗ ಪ್ರಯತ್ನಿಸು.
ನೀನು ಅನೇಕ ಜನರಿಂದ ಪ್ರೀತಿಸಲ್ಪಟ್ಟಿರ್ತೀಯಾ, ಕೆಲವ್ರು ನಿನ್ನ ಇಷ್ಟ ಪಡ್ದೇ ಇರ್ಬಹುದು. ಅವ್ರ ಬಗ್ಗೆ ತಲೆಕೆಡಿಸಿಕೊಳ್ಬೇಡ. ನಿನ್ನ ಮೇಲೆ ನಿಂಗೆ ವಿಶ್ವಾಸವಿರ್ಲಿ. ”

ಹೀಗೆ ಕೊಹ್ಲಿ ಭವಿಷ್ಯದಲ್ಲಿ ಏನೆಲ್ಲಾ ಆಗ್ಬಹುದು. ಯಾವ್ದಕ್ಕೆ ಜಾಸ್ತಿ ಒತ್ತು ಕೊಡ್ಬೇಕು ಅನ್ನೋದನ್ನು ತನ್ನ ಹಳೇ ನೆನಪುಗಳನ್ನು ಮೆಲಕು ಹಾಕುತ್ತಾ ಪತ್ರ ಬರೆದುಕೊಂಡಿದ್ದಾರೆ.

`ಗಂಗೂಲಿ, ಸಚಿನ್ ಮಾತಿಗೂ ಬೆಲೆ ಕೊಟ್ಟಿರ್ಲಿಲ್ಲ ಕ್ಯಾಪ್ಟನ್ ಕೊಹ್ಲಿ’!

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments