ಧೋನಿ, ಗಂಗೂಲಿಯೂ ಮಾಡಲಾಗದ ರೆಕಾರ್ಡ್ ಮಾಡಿದ್ರು ಕೊಹ್ಲಿ..!

0
245

ಏಕದಿನ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಆಗಿ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನ ನಿರ್ಮಿಸಿದ್ದಾರೆ. ಇನ್ನೂ ಹಲವು ದಾಖಲೆಗಳನ್ನ ಚಿಂದಿ ಉಡಾಯಿಸಲು ರೆಡಿಯಾಗಿದ್ದಾರೆ. ಅಂತೆಯೇ ನಾಯಕನಾಗಿಯೂ ಕೊಹ್ಲಿ ರೆಕಾರ್ಡ್ ಕಿಂಗ್ ಎನಿಸಿಕೊಳ್ಳುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಕೊಹ್ಲಿ ಗೆಲುವಿನ ಅರ್ಧಶತಕ ಬಾರಿಸಿದ್ದಾರೆ. ಒಂಡೇ ಕ್ರಿಕೆಟ್​ನಲ್ಲಿ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ 50ನೇ ಗೆಲುವು ತಂದುಕೊಟ್ಟಿರುವ ಕೊಹ್ಲಿ, ಹೊಸ ದಾಖಲೆ ಬರೆದಿದ್ದಾರೆ. ಭಾರತದ ಪರ ವೇಗವಾಗಿ 50 ಗೆಲುವು ತಂದುಕೊಟ್ಟ ನಾಯಕ ಎನಿಸಿಕೊಂಡಿದ್ದಾರೆ. ತಮ್ಮ 69ನೇ ಪಂದ್ಯದಲ್ಲೇ ಹಾಫ್ ಸೆಂಚುರಿ ಬಾರಿಸಿರುವ ಕೊಹ್ಲಿ, ಭಾರತೀಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಏಕದಿನ ನಾಯಕನಾಗಿ ವಿರಾಟ್​ ​ಕೊಹ್ಲಿ
ಪಂದ್ಯ:  69
ಗೆಲುವು: 50
ಟೈ/ರದ್ದು: 1/1
ಸರಾಸರಿ :  73.88
ಟೀಮ್​ ಇಂಡಿಯಾದ ಏಕದಿನ ನಾಯಕನಾಗಿ ವಿರಾಟ್​ಕೊಹ್ಲಿ 69 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. 69 ಮ್ಯಾಚ್​​ಗಳ ಪೈಕಿ 50 ಮ್ಯಾಚ್ ಗೆಲ್ಲಿಸಿಕೊಟ್ಟಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 16 ಪಂದ್ಯಗಳಲ್ಲಿ ಸೋಲುಂಡಿದ್ದು, 1 ಪಂದ್ಯ ಟೈ ಹಾಗೂ ಇನ್ನೊಂದು ಪಂದ್ಯ ರದ್ದಾಗಿದೆ. ಇದೆರೊಂದಿಗೆ ಕ್ಯಾಪ್ಟನ್​ ಕೊಹ್ಲಿಯ ಗೆಲುವಿನ ಸರಾಸರಿ 73.88ಕ್ಕೇರಿದೆ.

ನಾಯಕನಾಗಿ ಹೆಚ್ಚು ಗೆಲುವು
ನಾಯಕ       ಪಂದ್ಯ               ಗೆಲುವು
ಧೋನಿ        200             110
ಅಜುರುದ್ಧೀನ್​  174             090
ಗಂಗೂಲಿ      146             076
ವಿರಾಟ್​​ ಕೊಹ್ಲಿ 069             050
ಇನ್ನು ಭಾರತದ ಪರ ಏಕದಿನ ನಾಯಕರಾಗಿ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ಎಮ್​ಎಸ್​​ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಎಮ್​ಎಸ್​ಡಿ 200 ಪಂದ್ಯಗಳಲ್ಲಿ ಟೀಮ್​ ಇಂಡಿಯಾವನ್ನ ಮುನ್ನಡೆಸಿ 110ರಲ್ಲಿ ಗೆಲುವು ತಂದು ಕೊಟ್ಟಿದ್ರೆ, 174 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಮೊಹಮ್ಮದ್​​​​​​ ಅಜರುದ್ದೀನ್​ 90 ಜಯ ತಂದುಕೊಟ್ಟಿದ್ದಾರೆ. ಇನ್ನು 146 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿರುವ ಸೌರವ್​ ಗಂಗೂಲಿ, 76 ಪಂದ್ಯಗಳಲ್ಲಿ ಗೆಲುವಿನ ಸಿಹಿಯುಂಡಿದ್ದಾರೆ. ವಿರಾಟ್ ಕೊಹ್ಲಿ 69 ಮ್ಯಾಚ್​ಗಳಲ್ಲಿ 50 ಮ್ಯಾಚ್​ಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.
ಒಟ್ಟಿನಲ್ಲಿ ನಾಯಕನಾಗಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ವಿರಾಟ್ ಕೊಹ್ಲಿ, ಇದೀಗ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾರೆ. ಬ್ಯಾಟಿಂಗ್​​​ನಷ್ಟೇ ನಾಯಕತ್ವದಲ್ಲೂ ತಾನು ನಂಬರ್​​ಒನ್ ಎಂದು ತೋರಿಸಿಕೊಟ್ಟಿದ್ದಾರೆ.

ಕೊಹ್ಲಿ ಪಡೆಗೆ ‘ರೋ’.`ಚ’ಕ ವಿಜಯ..!

LEAVE A REPLY

Please enter your comment!
Please enter your name here