Friday, September 30, 2022
Powertv Logo
Homeವಿದೇಶಇಂದು ಕ್ರಿಕೆಟ್ ದೇವರು ಸಚಿನ್ ರೆಕಾರ್ಡ್ ಸರಿಗಟ್ಟುತ್ತಾರಾ ಕೊಹ್ಲಿ?

ಇಂದು ಕ್ರಿಕೆಟ್ ದೇವರು ಸಚಿನ್ ರೆಕಾರ್ಡ್ ಸರಿಗಟ್ಟುತ್ತಾರಾ ಕೊಹ್ಲಿ?

ಮುಂಬೈ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರತಿ ಮ್ಯಾಚ್​ನಲ್ಲೂ ಒಂದಲ್ಲ ಒಂದು ರೆಕಾರ್ಡ್ ಮಾಡ್ತಾನೇ ಇರ್ತಾರೆ. ಕೊಹ್ಲಿ ಅಂದ್ರೆ ರೆಕಾರ್ಡ್ ರೆಕಾರ್ಡ್ ಅಂದ್ರೆ ಕೊಹ್ಲಿ ಎಂಬಂತಾಗಿದೆ. ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಮ್ಯಾಚ್​ನಲ್ಲಿ ಕಿಂಗ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್ ಅವರ ರೆಕಾರ್ಡೊಂದನ್ನು ಸರಿಗಟ್ಟೋ ಚಾನ್ಸ್ ಇದೆ. ಸಚಿನ್ ಅವರ ಆ ರೆಕಾರ್ಡ್ ಸಮಗಟ್ಟಲು​ ಕೊಹ್ಲಿಗೆ ಬೇಕಿರೋದು ಒಂದೇ ಒಂದು ಸೆಂಚುರಿ!
 ಭಾರತದ ನೆಲದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 20 ಸೆಂಚುರಿ ಸಿಡಿಸಿದ್ದಾರೆ. ಕೊಹ್ಲಿ ಭಾರತದ ಅಂಗಳದಲ್ಲಿ ಇದುವರೆಗೆ 19 ಸೆಂಚುರಿ ಬಾರಿಸಿದ್ದಾರೆ. ಆಸೀಸ್​ ವಿರುದ್ಧದ ಮ್ಯಾಚ್​ನಲ್ಲಿ ಕೊಹ್ಲಿ ಶತಕ ಬಾರಿಸಿದ್ರೆ ಸಚಿನ್ ರೆಕಾರ್ಡ್ ಸರಿಗಟ್ಟಿದಂತಾಗುತ್ತೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments