Friday, October 7, 2022
Powertv Logo
Homeಕ್ರೀಡೆಕೊರೋನಾ ಬಗ್ಗೆ ಕೊಹ್ಲಿ, ರಾಹುಲ್, ಮಯಾಂಕ್ ಜಾಗೃತಿ ಟ್ವೀಟ್..!

ಕೊರೋನಾ ಬಗ್ಗೆ ಕೊಹ್ಲಿ, ರಾಹುಲ್, ಮಯಾಂಕ್ ಜಾಗೃತಿ ಟ್ವೀಟ್..!

ಕೊರೋನಾ ಇಡೀವಿಶ್ವದಲ್ಲಿ ಕೋಲಾಹಲ ಸೃಷ್ಟಿಸಿದೆ.‌ ಮಹಾಮಾರಿಗೆ ಎಲ್ಲರೂ ಆತಂಕಗೊಂಡಿದ್ದಾರೆ. ಸರ್ಕಾರ, ಆರೋಗ್ಯ ಇಲಾಖೆ, ಮಾಧ್ಯಮಗಳು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಅಂತೆಯೇ ಕ್ರಿಕೆಟಿಗರಾದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಸಹ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಕ್ಯಾಪ್ಟನ್ ಕೊಹ್ಲಿ, ”ಧೈರ್ಯವಾಗಿ ಕೊರೋನಾವನ್ನು ಎದುರಿಸೋಣ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳೋಣ. ಸುರಕ್ಷಿತವಾಗಿರೋಣಎಂದು ಟ್ವೀಟ್ ಮಾಡಿದ್ದಾರೆ.
ಟೀಮ್ ಇಂಡಿಯಾದಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಕನ್ನಡಿಗ ಕೆ.ಎಲ್ರಾಹುಲ್, ” ಇಂಥಾ ಸಮಯದಲ್ಲಿ ಪ್ರತಿಯೊಬ್ಬರೂ ಧೈರ್ಯವಾಗಿರೋಣ. ಒಬ್ಬರಿಗೊಬ್ಬರು ಜಾಗ್ರತೆ ವಹಿಸೋಣ. ಆರೋಗ್ಯ ತಜ್ಞರ (ವೈದ್ಯರ) ಸೂಚನೆಗಳನ್ನು ಪಾಲಿಸೋಣ. ಸುರಕ್ಷಿತವಾಗಿರೋಣಎಂಬ ಸಂದೇಶವನ್ನು ಟ್ವೀಟ್ ಮೂಲಕ ಹರಿಬಿಟ್ಟಿದ್ದಾರೆ.
ಇನ್ನೊಬ್ಬ ಕನ್ನಡಿಗ ಮಯಾಂಕ್ ಅಗರ್ ವಾಲ್ ಸ್ವಚ್ಛವಾಗಿರಿ ಎಂದು, ”ಕೈ ತೊಳೆಯಿರಿ, ಜನಸಂದಣಿಯಿಂದ ಸಾಧ್ಯವಾದಷ್ಟು ದೂರವಿರಿ, ಹುಷಾರಿಲ್ಲ ಅನ್ನಿಸಿದರೆ ಮನೆಯಲ್ಲೇ ವಿಶ್ರಾಂತಿ ಪಡೆಯಿರಿ, ವಾಟ್ಸ್ಆ್ಯಪ್ ಸಂದೇಶಗಳನ್ನು ನಂಬಬೇಡಿ, ಭಯಪಡಬೇಡಿಕೈ ತೊಳೆಯಿರಿಎಂದು ಟ್ವೀಟ್ ಮಾಡಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments