ಕೊಹ್ಲಿ ಅಪ್ರಬುದ್ಧ ಎಂದ ಸ್ಟಾರ್​​ ಬೌಲರ್..!

0
169

ಟೀಮ್ ಇಂಡಿಯಾದ ನಾಯಕ, ರನ್​ ಮಷಿನ್, ವಿಶ್ವದ ನಂಬರ್ 1 ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಅವರನ್ನು ಸ್ಟಾರ್ ಬೌಲರ್ ಒಬ್ರು ಅಪ್ರಬುದ್ಧ ಅಂತ ಕರೆದಿದ್ದಾರೆ..!
ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಕೊಹ್ಲಿಯನ್ನು ಟೀಕಿಸಿರುವ ಸ್ಟಾರ್​ ಬೌಲರ್. ಮೊನ್ನೆ ಮೊನ್ನೆಯಷ್ಟೇ ಮುಕ್ತಾಯಗೊಂಡಿರೋ ಐಪಿಎಲ್​ನಲ್ಲಿ ನಡೆದ ಘಟನೆಯೊಂದನ್ನು ಪ್ರಸ್ತಾಪಿಸಿ ಕೊಹ್ಲಿ ವಿರುದ್ಧ ಮಾತನಾಡಿದ್ದಾರೆ.


ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಬಾಡ ಆರ್​ಸಿಬಿ ಕ್ಯಾಪ್ಟನ್ ವಿರಾಟ್​​ ಅವರನ್ನು ಕೆಣಕಿದ್ದಾರೆ. ಡೆಲ್ಲಿ ಹಾಗೂ ಆರ್​ಸಿಬಿ ನಡುವಿನ ಮ್ಯಾಚ್​ವೊಂದ್ರಲ್ಲಿ ಕೊಹ್ಲಿ ಮತ್ತು ತಮ್ಮ ನಡುವೆ ನಡೆದ ವಾಕ್ಸಮರವನ್ನು ಉಲ್ಲೇಖಿಸಿರೋ ರಬಾಡ ‘ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಬಳಿಕ ಕೊಹ್ಲಿ ಅಸಮರ್ಪಕ ಪದವೊಂದನ್ನು ಬಳಸಿದ್ರು. ನಾನು ಅದಕ್ಕವರಿಗೆ ಸರಿಯಾಗಿ ಪ್ರತ್ಯುತ್ತರ ಕೊಟ್ಟೆ. ಅವ್ರು ಅದ್ರೊಂದಿಗೆ ತಮ್ಮ ಅಪ್ರಬುದ್ಧತೆಯನ್ನು ಬಹಿರಂಗೊಳಿಸಿದ್ರು. ಅವರೊಬ್ಬ ಅದ್ಭುತ ಆಟಗಾರ. ಆದ್ರೆ, ಅವರಿಗೆ ಟೀಕೆಗಳನ್ನು ಸಹಿಸಿಕೊಳ್ಳೋಕೆ ಆಗಲ್ಲ’ ಅಂದಿದ್ದಾರೆ.

LEAVE A REPLY

Please enter your comment!
Please enter your name here