ಟೀಮ್ ಇಂಡಿಯಾಕ್ಕೆ ಕೊಹ್ಲಿ ಗಾಯದ ‘ಬರೆ’..!

0
219

ವಿಶ್ವದಲ್ಲೀಗ ವಿಶ್ವ ಸಮರದ್ದೇ ಸದ್ದು. ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ಫೇವರೇಟ್ ಟೀಮ್​ ಗಳಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್​ ಇಂಡಿಯಾದ ಹೆಸ್ರು ಮುಂಚೂಣಿಯಲ್ಲಿದೆ.  3ನೇ ಐಸಿಸಿ ಏಕದಿನ ವಿಶ್ವಕಪ್ ಅನ್ನು ಭಾರತಕ್ಕೆ ತರಲು ಕೊಹ್ಲಿ ಬಾಯ್ಸ್ ಸಿದ್ಧರಾಗಿದ್ದಾರೆ. ಆದ್ರೆ, ಈ ನಡುವೆ ಬಿಗ್ ಶಾಕ್ ಒಂದು ಭಾರತಕ್ಕೆ ಎದರಾಗಿದೆ…! ಅದೇ ಕೊಹ್ಲಿ ಆಡೋದು ಡೌಟ್ ಅನ್ನೋ ಬಿಗ್ ಶಾಕಿಂಗ್ ನ್ಯೂಸ್.

ಯೆಸ್​, ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ, ವರ್ಲ್ಡ್​ ಕ್ರಿಕೆಟ್​ನ ನಂಬರ್ 1 ಬ್ಯಾಟ್ಸ್​ಮನ್.  ವಿರಾಟ್​ ಬ್ಯಾಟ್​ ಸದ್ದು ಮಾಡೋಕೆ ಶುರು ಮಾಡ್ತು ಅಂದ್ರೆ ಸಾಕು ರನ್ ಮಳೆ ಹೊಯ್ಯೋದು ಗ್ಯಾರೆಂಟಿ. ವಿಶ್ವದ ಘಟಾನುಘಟಿ ಬೌಲರ್​ಗಳಿಗೆ ಸಿಂಹಸ್ವಪ್ನವಾಗಿ ಕಾಡಿರೋ ರನ್​ ಮಷಿನ್ ಕೊಹ್ಲಿ ಟೀಮ್​ ಇಂಡಿಯಾದ ಪ್ರಮುಖ ಬ್ಯಾಟ್ಸ್​ಮನ್. ಆದರೆ, ಈ ಸ್ಟಾರ್ ಬ್ಯಾಟ್ಸ್​ಮನ್  ಮತ್ತು ಯಶಸ್ವಿ ನಾಯಕನ ಅನುಪಸ್ಥಿತಿಯಲ್ಲಿ ಭಾರತ ವಿಶ್ವಕಪ್ ಅಭಿಯಾನವನ್ನು ಶುರುಮಾಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿರಾಟ್ ಕೊಹ್ಲಿ ಗಾಯಗೊಂಡಿದ್ದು, ಜೂನ್ 5ರಂದು ರೋಸ್​ ಬೌಲ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕಿಂಗ್​ ಕೊಹ್ಲಿ ಹೊರಗಿರುವ ಸಾಧ್ಯತೆ ದಟ್ಟವಾಗಿದೆ.

ಅಭ್ಯಾಸದ ವೇಳೆ  ವಿರಾಟ್​ ಕೊಹ್ಲಿ ಬೆರಳಿಗೆ ಗಾಯವಾಗಿದೆ. ಕೂಡಲೇ ಫಿಸಿಯೋ ಪ್ಯಾಟ್ರಿಕ್​ ಪರ್ಹಾಟ್​ ಚಿಕಿತ್ಸೆ ನೀಡಿದ್ದಾರೆ. ಅವರ ಸಲಹೆಯಂತೆ ಕೊಹ್ಲಿ ಅಭ್ಯಾಸದಿಂದ ಹೊರಗುಳಿದಿದ್ದಾರೆ. ಗಾಯ ಗುಣವಾಗುತ್ತಿದ್ದು, ಕೊಹ್ಲಿ ಸೌತ್​ ಆಫ್ರಿಕಾ ವಿರುದ್ಧದ ಮ್ಯಾಚ್​ ಗೆ ಲಭ್ಯರಿರುತ್ತಾರೆ ಅಂತ ಹೇಳಲಾಗುತ್ತಿದೆ.

ಒಂದು ವೇಳೆ ಕೊಹ್ಲಿ ಆಡದಿದ್ದರೆ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿಯ ಅನುಪಸ್ಥಿತಿ ಭಾರತವನ್ನು ಕಾಡುವುದರಲ್ಲಿ ಡೌಟಿಲ್ಲ. ಸೌತ್​ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಇನ್ನೂ ಮೂರು ದಿನ ಬಾಕಿ ಇದ್ದು, ವಿರಾಟ್ ಗುಣ ಮುಖರಾಗಲಿ. ರನ್ ಮಳೆ ಸುರಿಸಲಿ ಅನ್ನೋದೇ ಎಲ್ಲರ ಆಶಯ.

 

LEAVE A REPLY

Please enter your comment!
Please enter your name here