ಪಿಂಕ್​ ಬಾಲ್ ಟೆಸ್ಟಲ್ಲಿ ‘ವಿರಾಟ’ ವೈಭವ..! 27ನೇ ಸೆಂಚುರಿ ಸಿಡಿಸಿದ ಕ್ಯಾಪ್ಟನ್ ಕೊಹ್ಲಿ

0
132

ಕೊಲ್ಕತ್ತಾ: ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಡೇ ನೈಟ್ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿರಾಟ್​ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.

ಮೊದಲ ದಿನದಾಂತ್ಯಕ್ಕೆ 59 ರನ್​ಗಳಿಸಿದ್ದ ಕೊಹ್ಲಿ ,ಎರಡನೇ ದಿನವಾದ ಇಂದು ಸೆಂಚುರಿ ಪೂರೈಸಿ ಬ್ಯಾಟಿಂಗ್ ವೈಭವ ಮುಂದುವರೆಸಿದ್ದಾರೆ. 

ಬಾಂಗ್ಲಾ ಬೌಲರ್​ಗಳನ್ನು ಬೇಕಾಬಿಟ್ಟಿ ದಂಡಿಸಿದ ಕೊಹ್ಲಿ 159 ಬಾಲ್​ಗಳಲ್ಲಿ 12 ಬೌಂಡರಿಗಳೊಂದಿಗೆ ಸೆಂಚುರಿ ಪೂರೈಸಿದ್ರು. ಕೊಹ್ಲಿ ಟೆಸ್ಟ್ ಕರಿಯರ್​ 27ನೇ ಸೆಂಚುರಿ ಇದಾಗಿದೆ. ಶತಕಕ್ಕೂ ಮುನ್ನ ಅವರು ತಮ್ಮ 53ನೇ ಟೆಸ್ಟ್​ನ 86ನೇ ಇನ್ನಿಂಗ್ಸ್​ನಲ್ಲಿ 5000 ರನ್​ ಗಡಿ ದಾಟುವ ಮೂಲಕ ಅತ್ಯಂತ ವೇಗದ 5000 ರನ್​ ಗಡಿ ದಾಟಿದ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

 

 

LEAVE A REPLY

Please enter your comment!
Please enter your name here