ತೂಗದೀಪ ಕುಟುಂಬದಿಂದ ಬರಲಿದ್ದಾನೆ ಮತ್ತೊಬ್ಬ ಕಪ್ತಾನ

0
189

 ಸ್ಯಾಂಡಲ್​ವುಡ್​ನಲ್ಲೀಗ ದಿಗ್ಗಜರ ಮೂರನೇ ತಲೆಮಾರಿನ ಸಿನಿಯಾನ ಹಬ್ಬ..! ಕನ್ನಡ ಚಿತ್ರರಂಗವನ್ನು ಆಳಿದ ಅತಿರಥ ಮಹಾರಥರ ಮೂರನೇ ಪೀಳಿಗೆ ಸಿನಿ ರಂಗಕ್ಕೆ ಎಂಟ್ರಿ ಕೊಡ್ತಿರೋ ಸುಗ್ಗಿಕಾಲ..! ಈಗ ಮತ್ತೊಬ್ಬ ಜನಪ್ರಿಯ ನಟರ ಮೊಮ್ಮಗನ ಸಿನಿ ಜರ್ನಿ ಆರಂಭವಾಗ್ತಾ ಇದೆ.

ಸ್ಯಾಂಡಲ್​ವುಡ್​ನಲ್ಲೀಗ ದಿಗ್ಗಜರ 3ನೇ ತಲೆಮಾರಿನ  ಸುಗ್ಗಿಕಾಲ. ಹೊಸ ಅಲೆಯ ಪರ್ವಕಾಲ..! ಕನ್ನಡ ಚಿತ್ರರಂಗವನ್ನು ಆಳಿದ ಮಹಾನ್​ ನಟರ ಮೊಮ್ಮಕಳ ಜಮಾನ. ಈಗ ಎಂಟ್ರಿ ಕೊಡ್ತಾ ಇರೋದು ಜೂನಿಯರ್ ಸುಲ್ತಾನ..

ಹೌದು, ವರನಟ ಡಾ. ರಾಜ್​ಕುಮಾರ್ ಅವರ ಮೂರನೇ ತಲೆಮಾರಿನ ಸಿನಿ ಜರ್ನಿ ಆರಂಭವಾಗಿರೋದು ಗೊತ್ತೇ ಇದೆ. ರಾಜ್​ ಅವರ ಎರಡನೇ ತಲೆಮಾರು, ಅಂದರೆ ಮಕ್ಕಳಾದ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್ ಮತ್ತು ಪುನೀತ್ ರಾಜ್​ಕುಮಾರ್ ಅವರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅದ್ಭುತ ಯಶಸ್ಸು ಕಂಡಿದ್ದಾರೆ. ಈ ಮೂವರು ಕನ್ನಡ ಚಿತ್ರರಂಗದ ಬಹುದೊಡ್ಡ ಆಸ್ತಿ…

ಅಷ್ಟೇ ಅಲ್ಲದೇ ರಾಜ್​ ಅವರ ಮೂರನೇ ತಲೆಮಾರು.,..ಅಂದರೆ ಮೊಮ್ಮಕ್ಕಳೂ ಕೂಡ ಸಿನಿಯಾನ ಆರಂಭಿಸಿ ಬಿಟ್ಟಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ ಅವರ ಮಗ ವಿನಯ್ ರಾಜ್​ಕುಮಾರ್ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಗುರು ರಾಜ್​ಕುಮಾರ್ ಎಂಟ್ರಿ ಕೊಡೋಕೆ ಸಿದ್ದರಾಗಿದ್ದಾರೆ. ರಾಜ್ ಅವರ ಮಗಳು ಪೂರ್ಣಿಮಾ ಮತ್ತು ನಟ ರಾಮ್​ಕುಮಾರ್ ಅವರ ಮಕ್ಕಳಾದ ಧೀರೇನ್​ ಮತ್ತು ಧನ್ಯ ಸಹ ಸಿನಿ ಜರ್ನಿ ಆರಂಭಿಸುತ್ತಿದ್ದಾರೆ.

ಹೀಗೆ ರಾಜ್​ ಫ್ಯಾಮಿಲಿಯ ಮೂರನೇ ತಲೆಮಾರಿನ ಸಿನಿ ಪಯಣದ ಆರಂಭದ ಬಗ್ಗೆ ಗೊತ್ತೇ ಇದೆ. ಇದೀಗ ತೂಗದೀಪ ಕುಟುಂಬದ ಮೂರನೇ ತಲೆಮಾರು ಚಿತ್ರರಂಗಕ್ಕೆ ಪ್ರವೇಶಿಸುವ ಸುಸುಂದರ್ಭ..!

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರುಗಳಲ್ಲಿ ತೂಗದೀಪ ಶ್ರೀನಿವಾಸ್ ಅವರು ಕೂಡ ಒಬ್ಬರು. ಖಳನಟರಾಗಿ ಸಾಕಷ್ಟು ಸದ್ದು ಮಾಡಿದ ಜನಪ್ರಿಯ ನಟ. ಪೌರಾಣಿಕ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಇವತ್ತು ಅವರ ಮಗ ಚಾಲೆಂಜಿಂಗ್ ಸ್ಟಾರ್ ಎನ್ನುವ ಬಿರುದಿನೊಂದಿಗೆ ಕನ್ನಡಿಗರ ಮನಸ್ಸಿನಲ್ಲಿ ‘ಯಜಮಾನ’ನಾಗಿ ನೆಲೆಯೂರಿದ್ದಾರೆ.

ಯಸ್ ತೂಗದೀಪ ಶ್ರೀನಿವಾಸ್ ಅವರ ಮಗ ದರ್ಶನ್​  ಅವರಿಂದು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್​ ಸುಲ್ತಾನಾ.. ಅಪಾರ ಅಭಿಮಾನಿಗಳ ಹೃದಯದಲ್ಲಿ ಸ್ಥಾನಪಡೆದಿರುವ ‘ಚಕ್ರವರ್ತಿ’. ತೂಗದೀಪ ಅವರ ಮಗನಾಗಿದ್ದರೂ ಆರಂಭ ದಿನಗಳಲ್ಲಿ ದರ್ಶನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ದರ್ಶನ್ ಎಂಬ ಹೆಸರು ಇವತ್ತು ಬರೀ ಹೆಸರಲ್ಲ..ಅದೊಂದು ಶಕ್ತಿ, ದರ್ಶನ್ ಅಂದರೆ ಇವತ್ತು ಒಂದು ಬ್ರಾಂಡ್..! ಇದೀಗ ತೂಗದೀಪ ಅವರ ಮೂರನೇ ತಲೆಮಾರು, ಅಂದರೆ ಶ್ರೀನಿವಾಸ್ ಅವರ ಮೊಮ್ಮಗ, ದರ್ಶನ್ ಅವರ ಮಗ ಸಿನಿಯಾನ ಆರಂಭಿಸುತ್ತಿದ್ದಾರೆ.

ಯಸ್, ತಮ್ಮ ಮಗ ವಿನಿಶ್ ಸಿನಿ ಜರ್ನಿ ಆರಂಭಿಸುತ್ತಿರೋ ಬಗ್ಗೆ ದರ್ಶನ್ ಅವರೇ ಹೇಳಿದ್ದಾರೆ. ನಮ್ಮ ಬ್ರಾಂಡ್​ ನ ಕಂಟಿನ್ಯೂ ಮಾಡ್ಕೊಂಡು ಹೋಗ್ಬೇಕಲ್ಲಾ… ನನ್ನ ಮಗನನ್ನೂ ಸಿನಿಮಾ ಕ್ಷೇತ್ರಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ವಿನಿಶ್ ದರ್ಶನ್ ಚಿಕ್ಕ ವಯಸ್ಸಲ್ಲೇ ಸ್ಯಾಂಡಲ್​ವುಡ್ ಪ್ರವೇಶಿಸೋದು ಖಚಿತವಾಗಿದೆ.

ಐರಾವತ ಸಿನಿಮಾದಲ್ಲಿ ವಿನಿಶ್ ಕಾಣಿಸಿಕೊಂಡಿದ್ದರು. ಯಜಮಾನ ಸಿನಿಮಾದಲ್ಲೂ ವಿನಿಶ್ ಸಾಂಗೊಂದರಲ್ಲಿ ಹಾಗೇ ಬಂದು ಹೀಗೆ ಹೋಗಿದ್ದಾರೆ. ಇನ್ನು ಪೂರ್ಣ ಪ್ರಮಾಣದಲ್ಲಿ ಸಿನಿ ಪಯಣ ಆರಂಭಿಸಲಿದ್ದಾರೆ. ಒಟ್ಟಿನಲ್ಲಿ ತೂಗದೀಪ ಶ್ರೀನಿವಾಸ ಅವರ ಮೂರನೇ ತಲೆಮಾರಿನ ಸಿನಿ ಜರ್ನಿ ಆರಂಭವಾಗುತ್ತಿದೆ. ವಿನಿಶ್ ತನ್ನ ತಾತಾ ಶ್ರೀನಿವಾಸ್, ತಂದೆ ದರ್ಶನ್ ಅವರಿಗಿಂತಲೂ ದೊಡ್ಡ ಹೆಸರು ಮಾಡಲಿ, ಅವರಿಗೆ ದೊಡ್ಡ ಯಶಸ್ಸು ಸಿಗಲಿ ಅಂತ ನಾವೂ ಹಾರೈಸೋಣ.

 

 

LEAVE A REPLY

Please enter your comment!
Please enter your name here