Home ಸಿನಿ ಪವರ್ ವಿನಯ್ ಗುರೂಜಿಯಿಂದ ಕಿಚ್ಚ ಸುದೀಪ್ ಗುಣಗಾನ : ಅಂದು ಅಪಹಾಸ್ಯ - ಇಂದು ಶ್ಲಾಘನೆ!

ವಿನಯ್ ಗುರೂಜಿಯಿಂದ ಕಿಚ್ಚ ಸುದೀಪ್ ಗುಣಗಾನ : ಅಂದು ಅಪಹಾಸ್ಯ – ಇಂದು ಶ್ಲಾಘನೆ!

ಇತ್ತೀಚೆಗೆ ಸ್ಯಾಂಡಲ್​ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದ ಗೌರಿಗದ್ದೆ ದತ್ತಪೀಠದ ವಿನಯ್ ಗುರೂಜಿ ಇಂದು ಅದೇ ಸುದೀಪ್ ಅವರನ್ನು ಹಾಡಿಹೊಗಳಿದ್ದಾರೆ. ವಿನಯ್ ಗುರೂಜಿ ಕಿಚ್ಚನನ್ನು ಗುಣಗಾನ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
”ಸುದೀಪ್ ಕನ್ನಡ ನಾಡಿನ ಹೆಬ್ಬುಲಿ, ನಿಜವಾದ ಮಾಣಿಕ್ಯ. ಅವರು ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದವರು. ಸುದೀಪ್ ಅವರ ಸ್ವಾಭಿಮಾನ ಗುಣಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ. ಸುದೀಪ್ ಅವರನ್ನು ನಾನು ಗೌರವಿಸುತ್ತೇನೆ” ಎಂದು ವಿನಯ್ ಗುರೂಜಿ ಹೇಳಿದ್ದಾರೆ.
ಅಪಾಹಸ್ಯ ಮಾಡಿರುವ ಬಗ್ಗೆ ಮಾತನಾಡಿದ ಅವರು, ಯುವಕರಿಗೆ ಬುದ್ಧಿ ಹೇಳುವುದಕ್ಕೆ ಸುದೀಪ್ ಹೆಸರು ಬಳಸಿದ್ದೇನೆ. ನಿಜವಾದ ಹುಲಿ ಬಂದ್ರೆ ನಾನು ಸಹ ಅಲ್ಲಿ ನಿಲ್ಲೋದಿಲ್ಲ. ವಿಡಿಯೋವನ್ನು ಕಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿ, ಸುದೀಪ್ ಸಾಧನೆಯನ್ನು ಕೊಂಡಾಡಿದ್ದಾರೆ.

”ಸುದೀಪ್​ ಸಿನಿಮಾ ನೋಡಿದ ಹುಡುಗರು ಹೇಳ್ತಾರೆ ಸುದೀಪ್ ಸಿನಿಮಾ ನೋಡಿದಾಗ ರೋಮವೆಲ್ಲಾ ಎದ್ದು ನಿಲ್ಲುತ್ತಂತೆ. ಹ, ಮಾಣಿಕ್ಯನಂತೆ, ಹೆಬ್ಬುಲಿಯಂತೆ..! ಅವನು ಹೆಬ್ಬುಲಿನಾ? ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾರೆ” ಅಂತ ವಿನಯ್ ಗುರೂಜಿ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅದು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. 

LEAVE A REPLY

Please enter your comment!
Please enter your name here

- Advertisment -

Most Popular

ಉಗ್ರ ಸಂಘಟನೆಗಳ ಪುಂಡರ ಕೃತ್ಯ ಖಂಡನೀಯ : ಸಿ.ಸಿ.ಪಾಟೀಲ

ಗದಗ: ಬೆಂಗಳೂರು ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಕಾರಣವಾಗಿರೋ ಕೆಲವು ಉಗ್ರ ಸಂಘಟನೆಗಳ ಪುಂಡರ ಕೃತ್ಯ ಖಂಡನೀಯ ಅಂತ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ಗದಗ...

ಸಂಸದೆ ಸುಮಲತಾ ಬೇಜವಾಬ್ದಾರಿ ನಡವಳಿಕೆ : ಬಿಸಿಯೂಟ ನೌಕರರ ಆಕ್ರೋಶ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ನಡೆಗೆ ಅಸಮಾಧಾನಗೊಂಡಿರುವ ಮಂಡ್ಯದ ಬಿಸಿಯೂಟ ನೌಕರರು, ಸಂಸದೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಮಂಡ್ಯ ಜಿಲ್ಲಾ...

ಸಕ್ಕರೆ ಕಾರ್ಖಾನೆಯನ್ನ ಖಾಸಗಿಯವರಿಗೆ ಲೀಸ್ ಕೊಡಲು ನಿರ್ಧಾರ : ರೈತ ಮುಖಂಡರ ಆಕ್ರೋಶ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಿಮ್ಮಾಪುರದ ರನ್ನ ಶುಗರ್ ಕಾರ್ಖಾನೆ ರೈತರಿಂದಲೇ  ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿಕೊಂಡು ರೈತರ ಹಿತಕಾಪಾಡಿಕೊಂಡು ಬಂದಿತ್ತು. ಪ್ರತಿವರ್ಷ  ರೈತರ ಹಿತ ಕಾಪಾಡಿಕೊಂಡು ಬರ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಆಡಳಿತ...

ಸಿದ್ಧರಾಮಯ್ಯ ಟ್ವೀಟ್​ಗೆ ಕಿಡಿ ಕಾರಿದ ಈಶ್ವರಪ್ಪ..!

ಶಿವಮೊಗ್ಗ: ಬೆಂಗಳೂರು ಗಲಭೆ ಸಂಬಂಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ. ಹಿಂದೂ ಗುರುಗಳು, ಮುಸ್ಲಿಂ ಹಿರಿಯರು ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿ ಎಂದು ಸಿದ್ಧರಾಮಯ್ಯ...

Recent Comments