Homeಕ್ರೀಡೆP.Cricketಕರ್ನಾಟಕ ತಂಡಕ್ಕೆ ಗುಡ್​​ಬೈ ಹೇಳಿದ ವಿನಯ್​​ ಕುಮಾರ್..!

ಕರ್ನಾಟಕ ತಂಡಕ್ಕೆ ಗುಡ್​​ಬೈ ಹೇಳಿದ ವಿನಯ್​​ ಕುಮಾರ್..!

ಟೀಮ್ ಇಂಡಿಯಾದ ಆಟಗಾರ, ಕನ್ನಡಿಗ, ದಾವಣೆಗೆರೆ ಎಕ್ಸ್​​ಪ್ರೆಸ್​ ವಿನಯ್ ಕುಮಾರ್ ಕರ್ನಾಟಕ ತಂಡಕ್ಕೆ ಗುಡ್​ಬೈ ಹೇಳಿದ್ದಾರೆ. ರಾಜ್ಯ ಕ್ರಿಕೆಟ್​ ಸಂಸ್ಥೆ ತೊರೆದಿರುವ ಅವರು ಪಾಂಡಿಚೆರಿ ತಂಡದ ಆಟಗಾರ ಹಾಗೂ ಮೆಂಟರ್​ ಆಗಿ ತಮ್ಮ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಮುಂದುವರೆಯಲಿದ್ದಾರೆ.
ಕಳೆದ 15 ವರ್ಷಗಳಿಂದ ಕರ್ನಾಟಕದ ಪರ ಆಡುತ್ತಿದ್ದ ವಿನಯ್ ಕುಮಾರ್ ರಾಜ್ಯಕ್ಕೆ 2 ಬಾರಿ ರಣಜಿ ಟ್ರೋಫಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಟೀಮ್ ಇಂಡಿಯಾ ಪರ ಇದುವರೆಗೆ 31 ಒಡಿಐ ಹಾಗೂ 1 ಟೆಸ್ಟ್ ಆಡಿದ್ದಾರೆ.
ಇನ್ನು ರಾಜ್ಯದ ಸ್ಟುವರ್ಟ್​ ಬಿನ್ನಿ, ಸಿ.ಎಂ ಗೌತಮ್ ಹಾಗೂ ರಾಬಿನ್ ಉತ್ತಪ್ಪ ಕೆಎಸ್​ಸಿಎನಿಂದ ನಿರಾಕ್ಷೇಪಣ ಪತ್ರ ಪಡೆದು ಬೇರೆ ರಾಜ್ಯದ ಪರ ಆಡುತ್ತಿರುವುದನ್ನು ಸ್ಮರಿಸಬಹುದು.

LEAVE A REPLY

Please enter your comment!
Please enter your name here

- Advertisment -

Most Popular

Recent Comments