ವಿಜಯಪುರ: ಅಕ್ಕಮಹಾದೇವಿ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ವಿವಿಧ ಕಲಾಕೃತಿಗಳು, ಹಾಗೂ ಹಳ್ಳಿಯಿಂದ ಪಟ್ಟಣದವರೆಗೆ ವಿವಿಧ ಕೆತ್ತನೆಗಳನ್ನು ಕೆತ್ತಲಾಗಿದೆ.
ನೂರು ಎಕರೆ ಪ್ರದೇಶದಲ್ಲಿರುವ ಈ ವಿವಿಯಲ್ಲಿ ಸುಂದರ ಕೆತ್ತನೆಗಳನ್ನು ಕೆತ್ತಲಾಗಿದ್ದು, ಇದು ಎಂಥವರನ್ನು ಸಹಿತ ತನ್ನತ್ತ ಕೈಬೀಸಿ ಕರೆಯುತ್ತದೆ. ಹಳ್ಳಿಗಳಲ್ಲಿ ಮನೆಗಳ ಚಿತ್ರಣ, ಹಾಲು ಕರೆಯುವುದು, ಸೇವಿಗೆ ಹಾಕುವುದು, ಹೂ ಕಟ್ಟುವುದು, ಗೋವುಗಳೊಂದು, ಪುಟಾಣಿ ಮಕ್ಕಳ ಆಟ, ಪುಟ್ಟ ಮಕ್ಕಳಿಗೆ ತಾಯಿ ಹಾಲುಣಿಸುವುದು, ಪಾತ್ರೆ ತಿಕ್ಕುವುದು, ಕುರಿ ಸಾಕಾಣಿಕೆ, ಮನೆಯಲ್ಲಿ ಬೀಸಣಿಕೆಯಲ್ಲಿ ಬೀಸುವುದು, ಮಕ್ಕಳಿಗೆ ಸ್ನಾನ ಮಾಡಿಸುವುದು, ಮಕ್ಕಳು ಶಾಲೆಯತ್ತ ಹೋಗುವುದು ಹೀಗೆ ಹಳ್ಳಿಯಿಂದ ಹಿಡಿದು ಪಟ್ಟಣದ ಜೀವನ ರೂಪಿಸುವ ಹಲವು ಕಲಾಕೃತಿಗಳನ್ನು ಇಲ್ಲಿ ಕೆತ್ತಲಾಗಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಲಾದ ಈ ಕಲಾಕೃತಿಗಳು ಎಂಥವರನ್ನು ಸಹಿತ ಕೈಬೀಸಿ ಕರೆಯುತ್ತವೆ.
ಇನ್ನೂ ನೂರು ಎಕರೆ ವಿಶಾಲವಾದ ಪ್ರದೇಶದಲ್ಲಿ ಇರುವ ವಿವಿಯಲ್ಲಿ ಇನ್ನು ಹಲವು ವಿಜ್ಞಾನಕ್ಕೆ ಸಂಬಂಧಿಸಿದ ಈ ರೀತಿಯ ಕೆತ್ತನೆಗಳನ್ನು ನಿರ್ಮಿಸುವುದು ಕುಲಪತಿಗಳ ಯೋಚನೆಯಾಗಿದೆ.
2003 ರಲ್ಲಿಯೇ ಆರಂಭವಾದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ. ಮೊದಲಿಗೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ ಎಂಬ ನಾಮಕರಣವಿತ್ತು. 2017 ಜೂನ್ 11 ರಂದು ಇದಕ್ಕೆ ಅಕ್ಕಮಹಾದೇವಿ ಮಹಿಳಾ ವಿವಿ ಎಂದು ನಾಮಕರಣ ಮಾಡಲಾಯಿತು. ವಿಜಯಪುರ ನಗರದ ತೊರವಿ ಬಳಿ ಸುಮಾರು ನೂರು ಎಕರೆ ಪ್ರದೇಶದಲ್ಲಿರುವ ಈ ವಿದ್ಯಾನಿಲಯದಲ್ಲಿ 15 ಸ್ನಾತಕೋತ್ತರ ಕೋರ್ಸ್ಗಳು ನಡೆಯುತ್ತಿವೆ. ರಾಜ್ಯದ ವಿವಿಧ ಜಿಲ್ಲೆಯ 2700ಕ್ಕೂ ಅಧಿಕ ವಿದ್ಯಾರ್ಥಿನಿಯರು ಇಲ್ಲಿಗೆ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.