Monday, May 23, 2022
Powertv Logo
Homeಸಿನಿಮಾಫೆಭ್ರವರಿ 24ರಂದು ತೆರೆಗಪ್ಪಳಿಸಲಿರುವ ವಿಕ್ರಾಂತ್ ರೋಣ

ಫೆಭ್ರವರಿ 24ರಂದು ತೆರೆಗಪ್ಪಳಿಸಲಿರುವ ವಿಕ್ರಾಂತ್ ರೋಣ

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ವಿಕ್ರಾಂತ್​ ರೋಣ’ ಚಿತ್ರವು ಈ ಮೊದಲಿನ ಪ್ಲ್ಯಾನ್ ನಂತೆಯೇ ಫೆಬ್ರವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಪ್ಯಾನ್​ ಇಂಡಿಯಾ ಬಿಡುಗಡೆ ಮಾಡುವತ್ತ ಚಿತ್ರತಂಡ ಚಿಂತನೆ ನಡೆಸಿದ್ದು, ನಿಗದಿತ ವೇಳಾಪಟ್ಟಿಯಂತೆ ಫೆಬ್ರವರಿ 24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ ಚಿತ್ರ ನಿರ್ದೇಶನ ಮಾಡಿದ್ದು, ಅಡ್ವೆಂಚರ್ ಕಮ್ ಆ್ಯಕ್ಷನ್ ಡ್ರಾಮಾ ಆಗಿರುವ ಈ ಚಿತ್ರದತ್ತ ಎಲ್ಲರ ಗಮನ ನೆಟ್ಟಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕಾಗಿ ಸುದೀಪ್ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

- Advertisment -

Most Popular

Recent Comments