Thursday, September 29, 2022
Powertv Logo
Homeರಾಜ್ಯಯಡಿಯೂರಪ್ಪಗೆ ಸದ್ಯಕ್ಕೆ ರೀಲೀಫ್​​, ಬಿ.ವೈ ವಿಜಯೇಂದ್ರಗೆ ಸಂಕಷ್ಟ

ಯಡಿಯೂರಪ್ಪಗೆ ಸದ್ಯಕ್ಕೆ ರೀಲೀಫ್​​, ಬಿ.ವೈ ವಿಜಯೇಂದ್ರಗೆ ಸಂಕಷ್ಟ

ನವದೆಹಲಿ: ಕೊನದಾಸಪುರ ಫ್ಲಾಟ್ ನಿರ್ಮಾಣದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಚಿವ ಎಸ್.ಟಿ ಸೋಮಶೇಖರ್ ಗೆ ಸಧ್ಯಕ್ಕೆ ರಿಲೀಫ್ ನೀಡಲಾಗಿದ್ದು, ಉಳಿದ ಆರೋಪಿಗಳಿಗೆ ವಿಚಾರಣೆಗೆ ಸುಪ್ರೀಂಕೋರ್ಟ್ ಗ್ರೀನ್​ ಸಿಗ್ನಲ್​ ನೀಡಿದೆ.

ಸಿಎಂ ಆಗಿದ್ದ ವೇಳೆಯಲ್ಲಿ ಯಡಿಯೂರಪ್ಪ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪವರ್ ಟಿವಿ ದಾಖಲೆ ಸಮೇತವಾಗಿ ನಿರಂತರವಾಗಿ ಸುದ್ದಿ ಮಾಡಿ ಭ್ರಷ್ಟಾಚಾರವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು.

ಕೊನದಾಸಪುರ ಫ್ಲಾಟ್ ನಿರ್ಮಾಣದಲ್ಲಿ ಭ್ರಷ್ಟಾಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಎಸ್.ಟಿ ಸೋಮಶೇಖರ್, ಬಿವೈ ವಿಜಯೇಂದ್ರ ಸೇರಿದಂತೆ ಒಟ್ಟು 9 ಜನರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಡಿಯೂರಪ್ಪ ಮತ್ತು ಎಸ್.ಟಿ ಸೋಮಶೇಖರ್ ಗೆ ರಿಲೀಫ್ ನೀಡಲಾಗಿದೆ. ಉಳಿದ ಬಿವೈ ವಿಜಯೇಂದ್ರ ಸೇರಿದಂತೆ ಏಳು ಜನರ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್​ ಅಸ್ತು ಎಂದಿದೆ.

ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ, ರಾಜ್ಯಪಾಲರ ಪೂರ್ವಾನುಮತಿ ಇಲ್ಲದೆ ತನಿಖೆ ನಡೆಸುವಂತಿಲ್ಲವೆಂದು ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶದ ಮೇರೆಗೆ, ಲೋಕಾಯುಕ್ತಕ್ಕೆ ಪ್ರಕರಣ ದಾಖಲಿಸಿ ತನೆಖೆ ನಡೆಸಲು ಸೂಚಿಸಲಾಗಿತ್ತು. ಅದರಂತೆ ಯಡಿಯೂರಪ್ಪ ಸೇರಿ ಒಂಬತ್ತು ಜನರ ವಿರುದ್ಧ ಲೋಕಾಯುಕ್ತದಲ್ಲಿ ಎಎಫ್​ಐಆರ್​ ದಾಖಲಾಗಿತ್ತು.

ಯಡಿಯೂರಪ್ಪ ಅವರ ಭ್ರಷ್ಟಾಚಾರ ಬಗ್ಗೆ ಜನಪ್ರತಿನಿಧಿಗಳ ಕೋರ್ಟ್ ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ದೂರು ನೀಡಿದ್ದರು.  ಯಡಿಯೂರಪ್ಪ ಸೇರಿ ಒಂಬತ್ತು ಜನರ ವಿರುದ್ಧ ಲೋಕಾಯುಕ್ತದಲ್ಲಿ ಎಎಫ್​ಐಆರ್​ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಯಡಿಯೂರಪ್ಪ ಮೆಟ್ಟಿಲೇರಿದ್ದರು.

ಈಗ ವಿಚಾರಣೆ ನಡೆಸಿದ ಸುಪ್ರೀಂ ಬಿವೈ ವಿಜಯೇಂದ್ರ ಸೇರಿದಂತೆ 7 ಜನರ ಬಗ್ಗೆ ತನಿಖೆಗೆ ಅಸ್ತು ಎಂದಿದೆ.

 

- Advertisment -

Most Popular

Recent Comments