ವಿಜಯ್ ಕಿರಗಂದೂರ್ ರಿಯಲ್ ಸ್ಟಾರ್..!

0
646

 ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್​ ಹೀರೋ ಅನ್ನೋದು  ಗೊತ್ತೇ ಇದೆ. ಯಶ್  ಖಡಕ್ ಖದರ್ ಗೆ  ಭಾರತೀಯ ಚಿತ್ರರಂಗವೇ ಸಲಾಂ ರಾಕಿಭಾಯ್ ಅಂದಿದೆ. ಕನ್ನಡ  ಮಾತ್ರವಲ್ಲದೆ ಇದೀಗ ಬಾಲಿವುಡ್​. ಟಾಲಿವುಡ್, ಕಾಲಿವುಡ್, ಮಾಲಿವುಡ್  ಯಶ್ ಸಿನಿರಂಗದ ‘ರಾಜಾಹುಲಿ’ ಅಂತ  ಶಹಬ್ಬಾಸ್ ಗಿರಿ ಕೊಡುತ್ತಿವೆ.  ಆದರೆ, ಕೆಜಿಎಫ್​ ಯಶಸ್ಸಿನ ಹಿಂದೆ ಬಹಳಷ್ಟು ತೆರೆಮರೆಯ ಹೀರೋಗಳಿದ್ದಾರೆ .

ಡೈರೆಕ್ಟರ್ ನೀಲ್ ಕೆಜಿಎಫ್ ಸ್ಟಾರ್

 ಕೆಜಿಎಫ್​ ನ ತೆರೆಮರೆಯ ಹೀರೋಗಳಂತ ಬಂದ್ರೆ ಈಗಾಗಲೇ ನಾವು ಹೇಳಿದಂತೆ ಡೈರೆಕ್ಟರ್ ಪ್ರಶಾಂತ್ ನೀಲ್ ಫಸ್ಟ್ ನೆನಪಾಗ್ತಾರೆ. ತನ್ನ 2ನೇ ಚಿತ್ರದಲ್ಲೇ ಕನ್ನಡ ಚಿತ್ರರಂಗದ ಬ್ರಾಂಡ್ ವ್ಯಾಲ್ಯುವನ್ನು ಹೆಚ್ಚಿಸಿದ ಪ್ರಶಾಂತ್ ನೀಲ್  ಅವರತ್ತ ಇವತ್ತು ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ. ಯಾರ್ ಗುರೂ.. ಈ ಪ್ರಶಾಂತ್ ನೀಲ್..? ಎಲ್ಲಿಯವ್ರು. ಇವರ ಬ್ಯಾಗ್​ಗ್ರೌಂಡ್ ಏನು..? ಹಿಂದೆ ಯಾವೆಲ್ಲಾ ಮೂವಿಗಳನ್ನು ಮಾಡಿದ್ದಾರೆ ಅಂತ ತಿಳಿದುಕೊಳ್ಳುತ್ತಿದ್ದಾರೆ. ಎಷ್ಟೋ ಜನ ಪ್ರಶಾಂತ್ ನೀಲ್ ಅವರನ್ನು ಗೂಗಲ್​ ನಲ್ಲಿ ಹುಡುಕುತ್ತಿದ್ದಾರೆ.

ಸಲಾಂ ವಿಜಯ್ ಕಿರಗಂದೂರ್

ಡೈರೆಕ್ಟರ್​ ಪ್ರಶಾಂತ್ ನೀಲ್ ತಮ್ಮ ಮೊದಲ ಚಿತ್ರ ಉಗ್ರಂನಲ್ಲೇ ಭರವಸೆ ಮೂಡಿಸಿದ್ದು ನಿಜ. ಆದರೆ, ಎರಡನೇ  ಚಿತ್ರವನ್ನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡ್ತಾರೆ ಅನ್ನೋ ಕಾನ್ಫಿಡೆನ್ಸ್ ಯಾರಿಗೆ ತಾನೆ ಇರುತ್ತೆ? ಸಿನಿ ಗೆಲುವು ಅನ್ನೋದು ನೀರಿನ ಮೇಲಿನ ಗುಳ್ಳೆ ತರ. ಎಂಥೆಂಥಾ ದೊಡ್ಡ ದೊಡ್ಡ ಡೆರೆಕ್ಟರ್ ಗಳ ಸಿನಿಮಾಗಳೇ  ನೆಲಕಚ್ಚಿದ ಉದಾಹರಣೆಗಳಿವೆ. ಹೀಗಿರುವಾಗ ಯುವ ಡೈರೆಕ್ಟರ್ ನ 2ನೇ ಸಿನಿಮಾಕ್ಕೆ  ಕೋಟಿ ಕೋಟಿ ಬಂಡವಾಳ ಸುರಿಯುವ ಧೈರ್ಯ ಮಾಡೋದು ಇದೆಯಲ್ಲಾ..? ಅದು ಹುಡುಗಾಟಿಕೆ ಅಲ್ಲ..!

 ಆದರೆ ‘ರಾಜಕುಮಾರ’ ವಿಜಯ್ ಕಿರಗಂದೂರ್ ಅವರನ್ನು ಈ ವಿಷಯದಲ್ಲಿ ಮೆಚ್ಚಲೇ ಬೇಕು. ಪ್ರಶಾಂತ್ ನೀಲ್ ಅವರ ಮೇಲೆ. ಅವರ ಕಥೆ ಮೇಲೆ ಹಾಗೂ ಮನೆಮಗ ‘ರಾಮಾಚಾರಿ’ ರಾಕಿಂಗ್​ ಸ್ಟಾರ್ ಮೇಲೆ ನಂಬಿಕೆ ಇಟ್ಟು 80 ಕೋಟಿ ರೂಪಾಯಿಯನ್ನು ಕೆಜಿಎಫ್​ ಗೆ ಸುರಿದಿದ್ದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯ.

ವಿಜಯ್ ಕಿರಗಂದೂರ್ ಅವರು ಇಷ್ಟೊಂದು ದೊಡ್ಡ ಬಜೆಟ್ ಅನ್ನು ಕೆಜಿಎಫ್​ಗೆ ನೀಡದೇ ಇದ್ದಿದ್ದರೆ ಇವತ್ತು  ಸ್ಯಾಂಡಲ್​ವುಡ್ ನ ಈ ಕೆಜಿಎಫ್ ಅನ್ನೋ ಸಿನಿಮಾ ವರ್ಲ್ಡ್ ವೈಡ್ ಅಬ್ಬರಿಸೋಕೆ ಚಾನ್ಸೇ ಇರ್ತಿರ್ಲಿಲ್ಲ. ಫಸ್ಟ್ ಟೈಮ್ ಇನ್​ ದಿ ಹಿಸ್ಟರಿ ಕನ್ನಡದ ಸಿನಿಮಾವೊಂದು 5 ಭಾಷೆಗಳಲ್ಲಿ. ಅದರಲ್ಲೂ ಏಕಕಾಲದಲ್ಲಿ ರಿಲೀಸ್ ಆಗಿದೆ ಅಂದ್ರೆ ಅದು ಪ್ರೊಡ್ಸೂಸರ್ ವಿಜಯ್​ ಕಿರಂಗದೂರ್ ಅವರ ಸಾಹಸ ಅಂದ್ರೆ ತಪ್ಪಾಗಲ್ಲ.

 ಕಿರಂಗದೂರ್ ಕಥೆ ಓಕೆ, ಸ್ಯಾಂಡಲ್​ವುಡ್ ಆಚೆಗೆ ಯಾಕೆ ಅಂತ ಚಿಕ್ಕ ಬಜೆಟ್ ಮೂವಿಗೆ ಕೈ ಹಾಕಿ. ದೊಡ್ಡ ಸಿನಿಮಾ ಮಾಡುವ ಚಾಲೆಂಜ್ ಅನ್ನು ತನಗೆ ತಾನೇ ಸ್ವೀಕರಿಸದೇ ಇದ್ದಿದ್ದರೆ, ಕೆಜಿಎಫ್  ಈ ಮಟ್ಟದ ಯಶಸ್ಸು ಪಡೀತಾ ಇರಲಿಲ್ಲ.  ಸ್ಯಾಂಡಲ್​ವುಡ್ ಬ್ರಾಂಡ್​ ವ್ಯಾಲ್ಯೂ ಕೂಡ ಏಕಾಏಕಿ ಇಷ್ಟೊಂದು ಹೆಚ್ಚುತ್ತಿರಲಿಲ್ಲ. ಇದಕ್ಕಾಗಿ ನಾವು ಕೆಜಿಎಫ್ ರಿಯಲ್ ಸ್ಟಾರ್ ವಿಜಯ್ ಕಿರಗಂದೂರ್ ಅವರಿಗೆ ಬಿಗ್ ಸೆಲ್ಯೂಟ್ ಹೊಡಿಲೇ ಬೇಕು.

ಇನ್ನು ಈ ಕೆಜಿಎಫ್ ಗೆಲುವಿನಲ್ಲಿ ರಾಕಿಂಗ್ ಸ್ಟಾರ್ ಯಶ್,  ಚಿತ್ರಕ್ಕೆ ಬಣ್ಣ ಹಚ್ಚಿದ ಪ್ರತಿಯೊಬ್ಬರ ನಟನೆ, ಕಥೆ, ಚಿತ್ರಕಥೆ, ಸ್ಕ್ರೀನ್​ಪ್ಲೇ, ಚಿತ್ರ ನೆರೇಷನ್ ಎಲ್ಲದರ ಪಾತ್ರವೂ ಇದೆ. ಅಷ್ಟೇ ಅಲ್ಲ ಚಿತ್ರದ ಮೇಕಿಂಗ್ ಗೆ ಕಳೆದು ಹೋಗುತ್ತೀವಿ. ಭುವನ್ ಗೌಡ ಸಿನಿಮಾಟೋಗ್ರಫಿಯಂತೂ ಚಿಂದಿ. ರವಿ ಬಸ್ರೂರ್ ಅವರ ಸಂಗೀತ ಕೆಜಿಎಫ್ ಶಕ್ತಿ.  ಶ್ರೀಕಾಂತ್ ಅವರ ಎಡಿಟಿಂಗ್ ಕೂಡ ಸೂಪರ್.   ಟೆಕ್ನಿಕಲ್ ಆಗಿಯೂ ಸಿನಿಮಾ ಸಿಕ್ಕಾಪಟ್ಟೆ ರಿಚ್ ಆಗಿದೆ. ಹೀಗಾಗಿ ಕೆಜಿಎಫ್  ಟೀಮ್​ ನಲ್ಲಿ ದುಡಿದ ಪ್ರತಿಯೊಬ್ಬರೂ ಹೀರೋಗಳೇ… ಈ ತೆರೆಮರೆಯ ಹೀರೋಗಳಿಗೂ ನಮ್ಮದೊಂದು ಸಲಾಂ.

LEAVE A REPLY

Please enter your comment!
Please enter your name here