ಬಳ್ಳಾರಿ : ಕಳೆದ ಆರು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ ಅಂತ ಬಳ್ಳಾರಿಯ ವಿಮ್ಸ್ ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಧರಣಿ ಕೂತಿದ್ದಾರೆ. ಕೊರೊನಾ ವಾರಿಯರ್ ಅಂತ ಸರ್ಕಾರ ನಮ್ಮನ್ನ ಕರೆಯುತ್ತೆ. ಆದ್ರೆ ನಮಗೆ ಸರಿಯಾಗಿ ಪಿಪಿಇ ಕಿಟ್ ಗಳು ಮತ್ತು ಸುರಕ್ಷಾ ಕಿಟ್ ಗಳನ್ನೇ ಕೊಡುವುದಿಲ್ಲ. ಆರು ತಿಂಗಳಾಯ್ತು ಸಂಬಳವೇ ಬಂದಿಲ್ಲ. ಹೀಗಾದರೆ ನಮ್ಮ ಜೀವನ ಹೇಗೆ ನಡೀಬೇಕು ಅಂತ ಕೊರೊನಾ ವಾರಿಯರ್ಸ್ ಬಳ್ಳಾರಿಯ ವಿಮ್ಸ್ ಆವರಣದಲ್ಲಿ ಧರಣಿ ನಡೆಸುತ್ತಿದ್ದಾರೆ
ಸರ್ಕಾರ ನಮ್ಮ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎನ್ನುವ ಎಚ್ಚರಿಕೆ ಸಹ ನೀಡಿದ್ದಾರೆ. ಜೊತೆಗೆ ಪಾಸಿಟಿವ್ ಬಂದ ಸಿಬ್ಬಂದಿಯ ಪ್ರೈಮೆರಿ ಕಾಂಟ್ಯಾಕ್ಟ್ ಕ್ವಾರೆಂಟೈನ್ ಮಾಡುವುದಿಲ್ಲ. ಪ್ರೈಮೆರಿ ಕಾಂಟಾಕ್ಟ್ ಗಳಿಂದಾನೆ ಕೆಲಸ ಮಾಡಿಸುತ್ತಾರೆ ಅಂತ ಗುತ್ತಿಗೆ ಆಧಾರಿತ ವಿಮ್ಸ್ ಸಿಬ್ಬಂದಿ ಗಂಭೀರ ಅರೋಪ ಮಾಡಿದ್ದಾರೆ.
ವಿಮ್ಸ್ ಆವರಣದಲ್ಲಿ ಧರಣಿ ಕುಳಿತಿರುವ ಸಿಬ್ಬಂದಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇನ್ನು ಇಲ್ಲಿಯವರೆಗೆ ಸ್ಥಳಕ್ಕೆ ಯಾರೂ ಸಹ ಭೇಟಿ ನೀಡಿಲ್ಲ. ನಾವು ಮನವಿ ಪತ್ರ ನೀಡಲು ಹೋದ್ರೆ ನಮ್ಮನ್ನ ಕೆಲಸದಿಂದ ಕಿತ್ತುಹಾಕುತ್ತೇವೆಂದು ಹೆದರಿಸುತ್ತಾರೆ. ನಮ್ಮ ಅಳಲು ಕೇಳಲು ಯಾರೂ ಸಹ ಮುಂದೆ ಬಂದಿಲ್ಲ ಎಂದು ವಿಮ್ಸ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.