HomeP.Special``ಕಣ್ಣೀರು ಒರೆಸಿಕೋ  ಸೋದರಿ, ಹೊಸ ಪುಸ್ತಕ – ಮನೆ ಸಿಗಲಿದೆ’’ : ಸೋನು ಸೂದ್

“ಕಣ್ಣೀರು ಒರೆಸಿಕೋ  ಸೋದರಿ, ಹೊಸ ಪುಸ್ತಕ – ಮನೆ ಸಿಗಲಿದೆ’’ : ಸೋನು ಸೂದ್

ಬಾಲಿವುಡ್ ನಟ ಸೋನು ಸೂದು ಪರೋಪಕಾರದ ಮೂಲಕ ಆದರ್ಶರಾಗಿದ್ದಾರೆ. ಸದಾ ಒಂದಿಲ್ಲೊಂದು ರೀತಿಯಲ್ಲಿ ಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿರುವ ಸೋನು ಸೂದ್ ಮಾನವೀಯತೆಯ ಕಾರ್ಯಗಳನ್ನು ಮುಂದುವರೆಸಿದ್ದಾರೆ.

ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮ ತಮ್ಮ ತವರು ಸೇರಿಕೊಳ್ಳಲು ನೆರವಾಗಿದ್ರು ಸೋನು ಸೂದ್. ತಾವೇ ಎತ್ತುಗಳಾಗಿ ಉಳುಮೆ ಮಾಡುತ್ತಿದ್ದ ರೈತ ದಂಪತಿ ಮನಕಲಕುವ ವಿಡಿಯೋ ನೋಡಿ, ಆ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದು ಕೂಡ ನಿಮ್ಗೆ ನೆನಪಿರಬಹುದು. ಹೀಗೆ ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ನಟ, ಯುವತಿಯೊಬ್ಬಳಿಗೆ ಪುಸ್ತಕ – ಮನೆಯ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಹುಶಃ ಆ ವಿಡಿಯೋವನ್ನು ನೀವೂ ಕೂಡ ನೋಡಿರಹುದು. ಅದು ಛತ್ತೀಸ್​ಗಢದಲ್ಲಿ ಪ್ರವಾಹದಿಂದ ಮನೆ ಮತ್ತು ಪುಸ್ತಕಗಳನ್ನು ಕಳೆದುಕೊಂಡಿದ್ದ ಯುವತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಿಡಿಯೋ! ಆ ವಿಡಿಯೋವನ್ನು ನೋಡಿದ ಸೋನು ಸೂದ್ ಆ ಯುವತಿಗೆ ಧೈರ್ಯ ತುಂಬಿದ್ದಾರೆ .. ನಿನ್ನ ಸಹಾಯಕ್ಕೆ ನಾನಿದ್ದೇನೆ ಸೋದರಿ ಅಂತ ಅಭಯ ನೀಡಿದ್ದಾರೆ!

ಆ ವಿಡಿಯೋಕ್ಕೆ ರಿಪ್ಲೆ ಮಾಡಿರೋ ಸೋನು ಸೂದ್, “ ನಿನ್ನ ಕಣ್ಣೀರು ಒರೆಸಿಕೋ ಸಹೋದರಿ, ಹೊಸ ಪುಸ್ತಕಗಳು ನಿನಗೆ ತಲುಪಲಿವೆ … ಹೊಸ ಮನೆಯೂ ನಿರ್ಮಾಣವಾಗಲಿದೆ’’ ಅಂದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments