ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಕಿಶೋರಿ ಬಲ್ಲಾಳ್ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದವರು ಮಂಗಳವಾರ ವಿಧಿವಶರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಿಶೋರಿ ಬಲ್ಲಾಳ್ ಮೂಲತಃ ಮಂಗಳೂರಿನವರು. ಅವರು ಸುಮಾರು 72 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, 1960 ರಲ್ಲಿ ‘ಇವಳೆಂಥಾ ಹೆಂಡತಿ‘ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಅವರು ನಟಿಸಿರುವ ಪ್ರಮುಖ ಚಿತ್ರಗಳಾದ ಸ್ಪರ್ಶ ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನನ್ನುಸಿರೆ, ಕಹಿ, ಶಿವಗಾಮಿ, ಅಕ್ಕತಂಗಿ ಹಾಗೂ ಕೆಂಪೇಗೌಡ ಹೀಗೆ ಅನೇಕ ಸಿನಿಮಾಗಳಲ್ಲಿ ಅಮ್ಮನಾಗಿ ಅಜ್ಜಿಯಾಗಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಅಷ್ಟೆ ಅಲ್ಲದೆ 2004 ರಲ್ಲಿ ಬಾಲಿವುಡ್ನ ‘ಸ್ವದೇಶ್‘ಚಿತ್ರದಲ್ಲಿ ಶಾರೂಖ್ ಖಾನ್ ಜೊತೆಗೆ ಕಿಶೋರಿ ಬಲ್ಲಾಳ್ ನಟಿಸಿ ಸೈ ಎನಿಸಿಕೊಂಡಿದ್ದರು
where can i buy zithromax
zithromax generic