Tuesday, January 25, 2022
Powertv Logo
Homeತಂತ್ರಜ್ಞಾನಅಪರೂಪದ ನಡೆದಾಡುವ ಫಿಶ್​​​ ಪತ್ತೆ..!

ಅಪರೂಪದ ನಡೆದಾಡುವ ಫಿಶ್​​​ ಪತ್ತೆ..!

ನಡೆದಾಡುವ ಅಪರೂಪದ ಪಿಂಕ್ ಹ್ಯಾಂಡ್ ಫಿಶ್ 22 ವರ್ಷದ ಬಳಿಕ ಪತ್ತೆಯಾಗಿದೆ. ಟಾಸ್ಮೇನಿಯನ್ ಕರಾವಳಿಯ ಬಳಿ ಆಸ್ಟ್ರೇಲಿಯಾದ ಕಾಮನ್‍ವೆಲ್ತ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‍ನ ಸಂಶೋಧಕರ ತಂಡ ಈ ಮೀನು ಪತ್ತೆ ಮಾಡಿದ್ದಾರೆ.

ಈ ಅಪರೂಪದ ಮೀನು 1999ರಲ್ಲಿ ಒಮ್ಮೆ ಕಾಣಿಸಿಕೊಂಡಿತ್ತು. ನಂತರ ಮತ್ತೆ ಇದೀಗ ಕಾಣಿಸಿಕೊಂಡಿರುವ ವಿಚಾರವಾಗಿ ಸಂಶೋಧಕರ ತಂಡ ತಿಳಿಸಿದೆ. ಸಂಶೋಧಕರ ತಂಡ ಟಾಸೈನ್ ಸಮುದ್ರದ ಒಳಗೆ ಕ್ಯಾಮಾರಾವನ್ನು ಇಳಿಸಿದ್ದರು. 4 ಸಾವಿರ ಮೀಟರ್ ಅಡಿಯವರೆಗೆ ಕ್ಯಾಮೆರಾವನ್ನು ಇಳಿಬಿಟ್ಟಿದ್ದರು. ಒಂದು ವರ್ಷದ ನಂತರ ಕ್ಯಾಮರಾವನ್ನು ಹೊರತೆಗೆದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್ ಫಿಶ್ ನೋಡಿ ಸಂತಸಗೊಂಡಿದ್ದಾರೆ. ಗುಲಾಬಿ ಹ್ಯಾಂಡ್ ಫಿಶ್ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments