Thursday, October 6, 2022
Powertv Logo
Homeವಿದೇಶಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಮಾಜಿ ಬೌಲರ್​​ಗಳ ಬಿಗ್ ಫೈಟ್​!

ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಮಾಜಿ ಬೌಲರ್​​ಗಳ ಬಿಗ್ ಫೈಟ್​!

ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಎಂ.ಎಸ್ ಕೆ ಪ್ರಸಾದ್ ನಿನ್ನೆಯಷ್ಟೇ ಕೆಳಗಿಳಿದಿದ್ದಾರೆ. ಇದೀಗ ತೆರವಾದ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ಬೌಲರ್​ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ನೂತನ ಆಯ್ಕೆ ಸಮಿತಿ ಸದಸ್ಯರು ಹಾಗೂ ಮುಖ್ಯಸ್ಥರಾಗಲು ಮಾಜಿ ಆಟಗಾರರ ನಡುವೆ ಪೈಪೋಟಿ ಇದೆ. ಅದರಲ್ಲೂ ಮುಖ್ಯವಾಗಿ ಮುಖ್ಯಸ್ಥರ ಸ್ಥಾನಕ್ಕೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಮತ್ತು ಮುಂಬೈನ ಮಾಜಿ ವೇಗಿ ಅಜಿತ್ ಅಗರ್​​​ಕರ್​ ನಡುವೆ ಬಿಗ್ ಫೈಟ್ ಇದೆ. ಅಲ್ಲದೆ ಮಾಜಿ ಲೆಗ್​ಸ್ಪಿನ್ನರ್​ ಎಲ್. ಶಿವರಾಮಕೃಷ್ಣನ್ ಕೂಡ ಆ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ವೆಂಕಟೇಶ್ ಪ್ರಸಾದ್ ಜೂನಿಯರ್ ಸೆಲೆಕ್ಷನ್ ಕಮಿಟಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಜಿತ್ ಅಗರ್​ಕರ್ ಮುಂಬೈ ತಂಡದ ಆಯ್ಕೆ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಂತಿಮವಾಗಿ ಬಿಸಿಸಿಐ ಯಾರಿಗೆ ಪಟ್ಟ ಕಟ್ಟುತ್ತೆ ಅನ್ನೋದು ಕುತೂಹಲ.

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments