ಅರಮನೆ ನಗರಿಯಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

0
141

ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿನ ಆಡಿಟೋರಿಯಂ ಶಂಕುಸ್ಥಾಪನೆ ಹಾಗೂ ಭಾರತೀಯ ಭಾಷಾ ಸಂಸ್ಥಾನದ ಸುವರ್ಣ ಮಹೋತ್ಸಕ್ಕೆ ಆಗಮಿಸಿದ್ರು.
ಒಂದು ಸಾವಿರ ಆಸನಗಳ ಸಾಮರ್ಥ್ಯದಲ್ಲಿ ನಿರ್ಮಾಣವಾಗುತ್ತಿರುವ ಡಾ.ರಾಧಾಕೃಷ್ಣನ್ ಆಡಿಟೋರಿಯಂಗೆ ಶಂಕುಸ್ಥಾಪನೆ ನೆರವೇರಿಸಿದ್ರು. ಈ ವೇಳೆ ಮಾತನಾಡಿದ ಅವರು, ಜ್ಞಾನಾಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ಕರೆ ನೀಡಿದ್ರು. ಶಿಕ್ಷಣ ಎನ್ನುವುದು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರಬಾರದು. ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಹಾಗೂ ಉದ್ಯೋಗ ಸೃಷ್ಟಿಸಲು ಶಿಕ್ಷಣ ಪಡೆಯಬೇಕೆಂದು ಕಿವಿ ಮಾತು ಹೇಳಿದ್ರು. ಇದೇ ವೇಳೆ ಮಾತೃಭೂಮಿಯನ್ನ ಮರೆಯಬಾರದು ಉತ್ತಮ ಆಹಾರ ಪದ್ದತಿಯನ್ನ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ರು.

ಇನ್ನು, ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣಜಯಂತಿ ಸಮಾರಂಭಕ್ಕೆ ಚಾಲನೆ ನೀಡಿದ ವೆಂಕಯ್ಯ ನಾಯ್ಡು ಮಾತೃಭಾಷೆ ಉಳಿಸುವ ಕೆಲಸ ಆಗಬೇಕೆಂದರು. ಸ್ಥಳೀಯ ಭಾಷೆಯ ಮಹತ್ವದ ಬಗ್ಗೆ ತಿಳಿಸಿದ ವೆಂಕಯ್ಯನಾಯ್ಡು ಸಿಎಂ ಕುಮಾರಸ್ವಾಮಿಯಾಗಲಿ, ಪ್ರಧಾನಿ ನರೇಂದ್ರ ಮೋದಿಯವರಾಗಲಿ ಕಾನ್ವೆಂಟ್ ಗಳ ಮುಖ ನೋಡಿಲ್ಲ. ಆದ್ರೂ ಗೌರವ ಹುದ್ದೆ ಅಲಂಕರಿಸಿದ್ದಾರೆ. ಇದಕ್ಕೆ ಇಂಗ್ಲೀಷ್ ಕಾರಣವಲ್ಲ ನಮ್ಮ ಮಾತೃಭಾಷೆ ಅಂತಾ ಹೇಳಿದ್ರು.

LEAVE A REPLY

Please enter your comment!
Please enter your name here