ಮೈಸೂರು : ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಜನಸಾಮಾನ್ಯರನ್ನು ಬಿಟ್ಟೂ ಬಿಡದೆ ಕಾಡ್ತಿದೆ.ಈ ನಡುವೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ ರೈತರ ನೆರವಿಗೆ ಧಾವಿಸಿದ್ದು, ಹಾಲಿನ ದರ ಹೆಚ್ಚಳ ಮಾಡುವುದರ ಜೊತೆಗೆ ಹೈನುಗಾರಿಕೆ ಉತ್ತೇಜನಕ್ಕೂ ಮುಂದಾಗಿದೆ.
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯ ಕಂಗಾಲಾಗಿರುವಾಗ ಮೈಸೂರು ಜಿಲ್ಲಾ ಹಾಲು ಒಕ್ಕೂಟ ರೈತರ ನೆರವಿಗೆ ಬಂದಿದೆ. ರೈತರಿಗೆ ನೀಡೋ ಹಾಲಿನ ದರದಲ್ಲಿ 2 ರೂಪಾಯಿಗಳನ್ನ ಹೆಚ್ಚುವರಿಯಾಗಿ ಸೇರಿಸಿ 29 ರೂಪಾಯಿಗಳನ್ನು ನೀಡ್ತಿದೆ. ಇದು ಜಿಲ್ಲೆಯ ಸರಿಸುಮಾರು 90 ಸಾವಿರ ರೈತರಿಗೆ ಅನುಕೂಲವಾಗಿದೆ. ಪಿರಿಯಾಪಟ್ಟಣದಲ್ಲಿ ನೂತನ ಉಪ ಕಚೇರಿ ಕಟ್ಟಡ ಹಾಗೂ ರಾಸುಗಳಿಗೆ ಉತ್ತೇಜನ ನೀಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಜಾನುವಾರು ರಾಸುಗಳ ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಇನ್ನು ಮೈಸೂರು ಜಿಲ್ಲೆಯಲ್ಲಿಯೇ ಪಿರಿಯಾಪಟ್ಟಣ ತಾಲೂಕು ಅತಿಹೆಚ್ಚು ಹಾಲು ಉತ್ಪಾದಿಸುವ ತಾಲೂಕು ಆಗಿದೆ. ಹೀಗಾಗಿಯೇ ಇನ್ನೂ ಹೆಚ್ಚು ಹಾಲು ಉತ್ಪಾದನೆ ಮಾಡಲು ಹೈನುಗಾರಿಕೆಗೆ ಒತ್ತು ನೀಡಲು ಮೈಮುಲ್ ಅಧ್ಯಕ್ಷರ ತವರೇ ಆಗಿರೋ ಪಿರಿಯಾಪಟ್ಟಣದ ರೈತರಿಗೆ ಎಸ್ಬಿಐ ನೆರವಿನ ಜೊತೆಗೆ 5 ಸಾವಿರ ಹಸುಗಳನ್ನ ಕೊಡಿಸಲು ಮುಂದಾಗಿದ್ದಾರೆ.
ಒಟ್ಟಾರೆ, ಮೈಮುಲ್ ಅಧ್ಯಕ್ಷರು, ಸದ್ಯರ ಕಾಳಜಿಯಿಂದ ಹಾಲು ಉತ್ಪಾದಕರಿಗೆ ನೆರವಾದ್ರೆ, ಹೈನುಗಾರಿಕೆ ದುಬಾರಿಯಾಗುತ್ತದೆ ಇದರಿಂದ ರೈತರಿಗೂ ಕೂಡ ವರದಾನವಾಗಲಿದೆ.