ಆನೇಕಲ್ : ಎಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ ಕೊರೋನಾ ಕಾರಣದಿಂದಾಗಿ ಪ್ರತಿವರ್ಷದಂತೆ ಈ ವರ್ಷ ವೈಕುಂಠ ಏಕಾದಶಿಯನ್ನು ಸರಳವಾಗಿ ಆಚರಣೆ ಎಲ್ಲೆಡೆ ಆಚರಣೆಯನ್ನು ಮಾಡಲಾಗುತ್ತಿದೆ.
ಅದೇ ರೀತಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಶ್ರೀ ಚನ್ನಕೇಶವ ದೇವಾಲಯ ಇಂದು ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ದೇವಾಲಯದ ಪ್ರಾಂಗಣವನ್ನು ವಿವಿಧ ರೀತಿಯ ಹೂಗಳಿಂದ ಅಲಂಕರಿಸಿ ಭಕ್ತಾದಿಗಳನ್ನು ಬರ ಮಾಡಿಕೊಳ್ಳಲಾಗುತ್ತಿದೆ. ಶ್ರೀ ಚನ್ನಕೇಶವ ದೇವಾಲಯದಲ್ಲಿ ಚನ್ನಕೇಶ್ವರ ಸ್ವಾಮಿ ದೇವರಿಗೆ ವಿಶೇಷವಾದ ಅಭಿಷೇಕ ಅಲಂಕಾರವನ್ನು ಮಾಡಿ ವೈಕುಂಠ ದ್ವಾರದ ವ್ಯವಸ್ಥೆಯನ್ನು ಸಹ ಮಾಡಿ ಭಕ್ತಾದಿಗಳಿಗೆ ಶ್ರೀ ಚೆನ್ನಕೇಶವ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು, ಇದರಿಂದಾಗಿ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಜೊತೆಗೆ ವೈಕುಂಠ ಏಕಾದಶಿ ಬಹಳ ವಿಶೇಷವಾದ ದಿನವಾಗಿದ್ದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದೇವಾಲಯದ ಮಂಡಳಿ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಜೊತೆಗೆ ವೈಕುಂಠ ಏಕಾದಶಿ ವಿಷ್ಣುವಿನ ಆರಾಧನೆಗೆ ಬಹಳ ಶ್ರೇಷ್ಠ ದಿನ ಉತ್ತರಾಯಣ ಪುಣ್ಯಕಾಲ ಬರುವ ಧನುರ್ಮಾಸದಲ್ಲಿ ವೈಕುಂಠ ಏಕಾದಶಿಯ ದಿನ ವಿಷ್ಣುವಿನ ಆರಾಧನೆಯನ್ನು ಮಾಡಿ ಜನ ಸಾಮಾನ್ಯರು ನೇರವಾಗಿ ವೈಕುಂಟಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಚೆನ್ನಕೇಶವ ದೇವಾಲಯ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು, ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಪ್ರಧಾನ ಅರ್ಚಕರಾದ ಯತಿರಾಜು ಅವರು ಮಾತನಾಡಿದ್ದಾರೆ.