ಬೆಂಗಳೂರು: ಹೊಸ ವೈರಸ್ ಆತಂಕದ ನಡುವೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರ ಲಸಿಕೆ ವಿತರಣೆಯನ್ನು ಚುರುಕುಗೊಳಿಸಿದೆ. ಕೊರೋನಾ ಲಸಿಕೆ ನೀಡುವ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ. ಡಿಸೆಂಬರ್ 28,29 ರಂದು ಲಸಿಕೆ ನೀಡುವ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಪಂಜಾಬ್, ಅಸ್ಸಾಂ, ಆಂಧ್ರ, ಗುಜರಾತ್ನಲ್ಲಿ ಲಸಿಕೆ ಹಂಚಿಕೆ ಸಿದ್ದತೆ ಹೇಗಿದೆ ಅಂತ ತಿಳಿಯಲು ಪ್ರಯೋಗ ಮಾಡಲಾಗುತ್ತದೆ. ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ಅಣಕು ಕಾರ್ಯಾಚರಣೆಯಲ್ಲಿ ಲಸಿಕೆ ಬಿಟ್ಟು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತೆ. ಕೊರೋನಾ ಲಸಿಕೆ ಹಂಚಿಕೆ ವಿತರಣೆಗಾಗಿ ಕೊವೀಡ್ ವೆಬ್ ಸೈಟ್ ರಚನೆ ಮಾಡಲಾಗುತ್ತಿದೆ. ಜಾಲತಾಣದ ಚಟುವಟಿಕೆ, ಅಭಿವೃದ್ಧಿ ಬಗ್ಗೆ ಮಾಹಿತಿ. ಕೊವೀಡ್ ಲಸಿಕೆ ಹಂಚಿಕೆಯಲ್ಲಿ ಸುಧಾರಣೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.