Monday, May 23, 2022
Powertv Logo
Homeರಾಜ್ಯ12 ಶಾಲೆಗಳಿಗೆ ರಜೆ ಘೋಷಣೆ

12 ಶಾಲೆಗಳಿಗೆ ರಜೆ ಘೋಷಣೆ

ರಾಜ್ಯ : ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದು, ಶಾಲೆಯಲ್ಲಿ ಐದಕ್ಕಿಂತ ಹೆಚ್ಚು ಸೊಂಕು ತಗುಲಿದ ಮಕ್ಕಳ ಸುರಕ್ಷತೆಗಾಗಿ ಇಲ್ಲಿಯವರೆಗೆ ಜಿಲ್ಲೆಯ 12 ಶಾಲೆಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ರಜೆ ಘೋಷಿಸಿ ಆದೇಶಿಸಿದ್ದಾರೆ.

ಜನವರಿ 1 ರಿಂದ 24 ರವರೆಗೆ ಮುದ್ದೇಬಿಹಾಳದ 2, ಸಿಂದಗಿಯ 2, ಇಂಡಿಯ 2, ಬಸವನ ಬಾಗೇವಾಡಿ 2, ವಿಜಯಪುರ 2 ಹಾಗೂ ಬಬಲೇಶ್ವರ ಕೊಲ್ಹಾರ್ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇಲ್ಲಿಯವರೆಗೆ 117 ಮಕ್ಕಳಿಗೆ ಹಾಗೂ 6 ಜನ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಧೃಢಪಟ್ಟಿದೆ. ಹೀಗಾಗಿ ಜಿಲ್ಲಾಧಿಕಾರಿ ಚಿಂತನೆ ನಡೆಸಿ ಮುಂದೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂದು ಅಧಿಕಾರಿ ಪಿ.ಸುನೀಲಕುಮಾರ ಅವರು ಒಟ್ಟು 12 ಶಾಲೆಗಳಿಗೆ ರಜೆ ಘೋಷಣೆಯನ್ನು ಮಾಡಿದ್ದಾರೆ.

ಇದರಿಂದ ಪೋಷಕರು ಸಹ ತುಸು ನೆಮ್ಮದಿಯಾಗಿದ್ದಾರೆ.

- Advertisment -

Most Popular

Recent Comments