Home ಪವರ್ ಪಾಲಿಟಿಕ್ಸ್ ರಾಜ್ಯದ ಇಷ್ಟೆಲ್ಲಾ ಬೆಳವಣಿಗೆಗೆ ಸಂಸದ ಶ್ರೀನಿವಾಸ ಪ್ರಸಾದ್ ಕಾರಣವಂತೆ!

ರಾಜ್ಯದ ಇಷ್ಟೆಲ್ಲಾ ಬೆಳವಣಿಗೆಗೆ ಸಂಸದ ಶ್ರೀನಿವಾಸ ಪ್ರಸಾದ್ ಕಾರಣವಂತೆ!

ಮೈಸೂರು : ರಾಜ್ಯ ದಲ್ಲಿ ನಡೆದಿರುವ ಎಲ್ಲಾ ಬೆಳವಣಿಗೆಗೆ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್​ ಪ್ರಸಾದ್​ ಕಾರಣವಂತೆ! ಹೀಗಂದಿದ್ದು ನಿನ್ನೆಯಷ್ಟೇ ಅಧಿಕೃತವಾಗಿ ಬಿಜೆಪಿ ಸೇರಿದ ಮಾಜಿ ಜೆಡಿಎಸ್​ ರಾಜ್ಯಾಧ್ಯಕ್ಷ, ಅನರ್ಹ ಶಾಸಕ ಹೆಚ್ ವಿಶ್ವನಾಥ್!
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ರಾಜ್ಯದ ಇಷ್ಟೆಲ್ಲಾ ಬೆಳವಣಿಗೆಗೆ ಶ್ರೀನಿವಾಸ್​ ಪ್ರಸಾದ್​ ಅವರೇ ಕಾರಣ. ಶ್ರೀನಿವಾಸ್​ ಪ್ರಸಾದ್​ ಅವರ ಮುಖಾಂತರ ಯಡಿಯೂರಪ್ಪ ನನ್ನನ್ನು ಬಿಜೆಪಿಗೆ ಆಹ್ವಾನಿಸಿದರು. ಜೆಡಿಎಸ್​ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಕೇಳಿಕೊಂಡರು . ಶ್ರೀನಿವಾಸ್​ ಪ್ರಸಾದ್​ ಅವರನ್ನು ಹೊರತುಪಡಿಸಿ ಬೇರೆ ಯಾರು ಕೇಳಿದ್ದರೂ ನಾನದಕ್ಕೆ ಒಪ್ಪುತ್ತಿರಲಿಲ್ಲ ಎಂದು ಹೇಳಿದರು.
ಜಗತ್ತೇ ಅಭಿವೃದ್ಧಿಯ ಕಡೆಗೆ ಮುಖ ಮಾಡಿರುವಾಗ ನಾನೊಬ್ಬ ಯಾಕೆ ಸುಮ್ಮನಿರಲಿ ? ಭಾರತ ದೇಶ ಇಂದು ಅಭಿವೃದ್ಧಿಯ ಕಡೆಗೆ ಹೋಗುತ್ತಿದೆ. ಆ ಆಭಿವೃದ್ಧಿಯಲ್ಲಿ ನಾನೂ ಕೈಜೋಡಿಸಲು ಇಚ್ಛಿಸುತ್ತಿದ್ದೇನೆ. ಹಾಗಾಗಿ ಈ ಕನಕ ಜಯಂತಿಯಂದು ನಾನೂ ಮತ್ತು ವಿಜಯ್​ ಶಂಕರ್​ ಇಬ್ಬರು ಕನಕರು ಬಿಜೆಪಿ ಮನೆಗೆ ಬಂದಿದ್ದೇವೆ ಎಂದರು.

LEAVE A REPLY

Please enter your comment!
Please enter your name here

- Advertisment -

Most Popular

ದುಡ್ಡು  ಕೊಟ್ರೆ ಮಾತ್ರ ವಾರ್ಡ್​ ಬಾಯ್​​​ಗಳ ಕೆಲಸ..!

ಬೆಂಗಳೂರು : ದುಡ್ಡು ದುಡ್ಡು ದುಡ್ಡು ..  ಇಲ್ಲಿ ವಾರ್ಡ್​ ಬಾಯ್​ಗಳು ನೆಟ್ಟಗೆ ಕೆಲಸ ಮಾಡ್ಬೇಕು ಅಂದ್ರೆ ದುಡ್ಡು ಬಿಚ್ಚಲೇ ಬೇಕು! ಅಲ್ಪಸ್ವಲ್ಪ ದುಡ್ಡು ಕೊಟ್ರೆ ಧಿಮಾಕಿಂದ, ಸೊಕ್ಕಿನಿಂದ ಕೆಲಸ ಮಾಡ್ತಾರೆ! ಸ್ವಲ್ಪ...

ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಢ | 8 ಮಂದಿ ಸಜೀವ ದಹನ

ಅಹಮದಾಬಾದ್ : ನವರಂಗಪುರದ ಶ್ರೇಯ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಢ ಸಂಭಂವಿಸಿದ್ದು, 8  ಮಂದಿ ರೋಗಿಗಳು ಸಜೀವ ದಹನಗೊಂಡಿದ್ದಾರೆ ವರದಿಯಾಗಿದೆ. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿನ ಇಂಟೆನ್ಸಿವ್ ಕೇರ್ ಯುನಿಟ್ ( ಐಸಿಯು)...

ಬನ್ನೇರುಘಟ್ಟದಲ್ಲಿ ಸಫಾರಿ ಹುಲಿಯೊಂದಿಗೆ ಕಾಡಿನ ಹುಲಿ ಕಾದಾಟ..!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹುಲಿ ಮತ್ತು ಕಾಡಿನ ಹುಲಿ ಕಾದಾಡಿಕೊಂಡಿವೆ. ಸಫಾರಿ ಹುಲಿ ಮತ್ತು ಕಾಡಿನ ಹುಲಿ ಮುಖಾಮುಖಿಯಾಗಿದ್ದು, ಕಾದಾಟಕ್ಕಿಳಿದಿವೆ.  ಅವೆರಡರ ನಡುವೆ ತಂತಿ ಬೇಲಿ ಇದ್ದರೂ ಘರ್ಜಿಸುತ್ತಾ ಜಗಳಕ್ಕಿಳಿದಿವೆ. ಹುಲಿಗಳ ಈ ಕಾದಾಟದ...

ಮಲೆನಾಡಿನಲ್ಲಿ ವರ್ಷಧಾರೆ ವೈಭವ ; ಕಣ್ಮನ ಸೆಳೆಯುತ್ತಿದೆ ಜೋಗ ಜಲಪಾತ

 ಶಿವಮೊಗ್ಗ : ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಆಶ್ಲೇಷ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಜಗದ್ವಿಖ್ಯಾತ ಜೋಗ ಜಲಪಾತ, ಮೈದುಂಬುತ್ತಿದ್ದು, ಮಂಜು ಮುಸುಕಿನ ಚೆಲ್ಲಾಟದ...

Recent Comments