HomeTechnologyUV-C ತಂತ್ರಜ್ಞಾನ ಮಾಹಿತಿ

UV-C ತಂತ್ರಜ್ಞಾನ ಮಾಹಿತಿ

UV-C ನೀರಿನ ಶುದ್ಧೀಕರಣವು ಅಥವಾ ‘ಅಲ್ಟ್ರಾವೈಲೆಟ್-C’ (UV-C water purification) ಸೋಂಕುಗಳೆತ ತಂತ್ರಜ್ಞಾನವು, ನೀರನ್ನು ಸೋಂಕುರಹಿತಗೊಳಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ಈ ತಂತ್ರಜ್ಞಾನದಲ್ಲಿ, ವಿಶೇಷ “ಕ್ರಿಮಿನಾಶಕ” UV-C ದೀಪಗಳು ಹೆಚ್ಚಿನ ತೀವ್ರತೆಯ ನೇರಳಾತೀತ ಬೆಳಕನ್ನು ಹೊರಸೂಸುತ್ತವೆ ಮತ್ತು ಪರಿಸರಕ್ಕೆ ಹಾನಿಕಾರಕವಾದ ಕಠಿಣ ರಾಸಾಯನಿಕಗಳನ್ನು ಬಳಸದೆ ನೀರನ್ನು ಶುದ್ಧೀಕರಿಸುತ್ತವೆ.

ನೇರಳಾತೀತ ವಿಕಿರಣ’ ಎಂದರೇನು?

ಯುವಿ ವಿಕಿರಣ’ವು, ಕ್ಷ – ಕಿರಣಗಳು ಮತ್ತು ‘ಗೋಚರ ಬೆಳಕು’ ಇವುಗಳ ನಡುವಿನ ‘ವಿದ್ಯುತ್ಕಾಂತೀಯ ವರ್ಣಪಟಲ’ದ ಭಾಗವಾಗಿದೆ. ಸೂರ್ಯನ ಬೆಳಕು ನೇರಳಾತೀತ ವಿಕಿರಣದ ಸಾಮಾನ್ಯ ರೂಪವಾಗಿದೆ, ಇದು ಮುಖ್ಯವಾಗಿ ಮೂರು ವಿಧದ ನೇರಳಾತೀತ ಕಿರಣಗಳನ್ನು ಉತ್ಪಾದಿಸುತ್ತದೆ:

ಅದನ್ನು ಹೇಗೆ ಬಳಸಲಾಗುತ್ತಿದೆ?

ಯುವಿ ವಿಕಿರಣ(UV radiations)ಗಳನ್ನು ಸಾಮಾನ್ಯವಾಗಿ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಬಳಸಲಾಗುತ್ತದೆ.
1. UV-C ಎಂದೂ ಕರೆಯಲ್ಪಡುವ ನೇರಳಾತೀತ ಸೂಕ್ಷ್ಮಾಣು ವಿಕಿರಣ (Ultraviolet germicidal irradiation -UVGI) ಸೋಂಕು ನಿವಾರಕ (disinfection) ವಿಧಾನವಾಗಿದೆ.

2. ಸೂಕ್ಷ್ಮಜೀವಿಗಳನ್ನು ಕೊಲ್ಲಲು ಅಥವಾ ನಿಷ್ಕ್ರಿಯಗೊಳಿಸಲು UVGI ಸಣ್ಣ-ತರಂಗಾಂತರದ ನೇರಳಾತೀತ ಬೆಳಕನ್ನು ಬಳಸುತ್ತದೆ,ಇದು ಸೂಕ್ಷ್ಮಜೀವಿಗಳ ನ್ಯೂಕ್ಲಿಯಿಕ್ ಆಮ್ಲವನ್ನು ನಾಶಪಡಿಸುತ್ತದೆ ಅಥವಾ ಅದು ಅವುಗಳ ಡಿಎನ್ಎಯನ್ನು ಕರಗಿಸುತ್ತದೆ, ಇದರಿಂದಾಗಿ ಸೂಕ್ಷ್ಮಜೀವಿಗಳಿಗೆ ಅಗತ್ಯವಾದ ಸೆಲ್ಯುಲಾರ್ ಕಾರ್ಯಗಳನ್ನು ನಿರ್ವಹಿಸಲು ಮತ್ತು ಗುಣಿಸಲು ಸಾಧ್ಯವಾಗುವುದಿಲ್ಲ.

3. UVGI ಅನ್ನು ಆಹಾರ, ಗಾಳಿ ಮತ್ತು ನೀರಿನ ಶುದ್ಧೀಕರಣದಂತಹ ವಿವಿಧ ಅನ್ವಯಿಕೆಗಳಲ್ಲಿ ಬಳಸಲಾಗುತ್ತದೆ.

ಇದು ಮನುಷ್ಯರಿಗೆ ಸುರಕ್ಷಿತವೇ…?

ಸಂಶೋಧನಾ ಅಧ್ಯಯನಗಳ ಪ್ರಕಾರ, ನಿರ್ಜೀವ ವಸ್ತುಗಳನ್ನು ಸೋಂಕುನಿವಾರಕಗೊಳಿಸಲು ಈ ಸಾಧನವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ, ಈ ಸಾಧನದಲ್ಲಿ ಬಳಸುವ ಯುವಿ-ಸಿ ವಿಕಿರಣವು ಜೀವಿಗಳ ಚರ್ಮ ಮತ್ತು ಕಣ್ಣುಗಳಿಗೆ ಹಾನಿಕಾರಕವಾಗಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments