Saturday, May 28, 2022
Powertv Logo
Homeದೇಶಅಮೆರಿಕಾದಿಂದ ಭಾರತಕ್ಕೆ ಮುಂದಿನ ವಾರ 100 ವೆಂಟಿಲೇಟರ್​ ರವಾನೆ

ಅಮೆರಿಕಾದಿಂದ ಭಾರತಕ್ಕೆ ಮುಂದಿನ ವಾರ 100 ವೆಂಟಿಲೇಟರ್​ ರವಾನೆ

ವಾಷಿಂಗ್ಟನ್: ಈ ಹಿಂದೆ ಭಾರತಕ್ಕೆ ವೆಂಟಿಲೇಟರ್​ಗಳನ್ನು ದಾನ ನೀಡುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಅದರಂತೆ ಮುಂದಿನ ವಾರ ಭಾರತಕ್ಕೆ 100 ವೆಂಟಿಲೇಟರ್​ಗಳನ್ನು ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯೊದಿಗೆ ಟ್ರಂಪ್ ಮಂಗಳವಾರ ಕರೆ ಮಾಡಿ ಮಾತನಾಡಿದ್ದು, ಈ ಬಗ್ಗೆ ಮೋದಿಯವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಜಿ-7 ಶೃಂಗಸಭೆ, ಕೋವಿಡ್-19 ಪ್ರತಿಕ್ರಿಯೆ ಹಾಗೂ ಪ್ರಾದೇಶಿಕ ಭದ್ರತಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ಅದರೊಂದಿಗೆ ಮುಂದಿನ ವಾರದಲ್ಲಿ ಭಾರತಕ್ಕೆ ವೆಂಟಿಲೇಟರ್​ಗಳನ್ನು ನೀಡುವುದರ ಬಗ್ಗೆಯೂ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments