Home P.Special UPSC ಪರೀಕ್ಷೆಯಲ್ಲಿ ಕೊಪ್ಪಳದ ವಿನೋದ್​​ ಪಾಟೀಲ್​ಗೆ 132ನೇ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಕೊಪ್ಪಳದ ವಿನೋದ್​​ ಪಾಟೀಲ್​ಗೆ 132ನೇ ರ‍್ಯಾಂಕ್

ಕೊಪ್ಪಳ :  UPSC ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ  ಹೊಸಕೇರಿಯ ವಿನೋದ್ ಪಾಟೀಲ್ 132ನೇ ರ‍್ಯಾಂಕ್​​  ಪಡೆದಿದ್ದಾರೆ. 

2017ರಲ್ಲಿ ನಡೆದ ಯುಪಿಎಸ್​ಸಿ ಪರೀಕ್ಷೆಯಲ್ಲಿ 294ನೇ ರ‍್ಯಾಂಕ್​​ ನಲ್ಲಿ ಉತ್ತೀರ್ಣರಾಗಿದ್ದ, ವಿನೋದ್ ಪಾಟೀಲ್ ಸದ್ಯಕ್ಕೆ ಆದಾಯ ತೆರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಹಾರಾಷ್ಟ್ರದ ನಾಗಾಪೂರದಲ್ಲಿರುವ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಅವರು, ಒಂದು ವರ್ಷ ರಜೆ ಪಡೆದು ಪುನಃ 2019ರಲ್ಲಿ ಯುಪಿಎಸ್​ಸಿ ಪರೀಕ್ಷೆ ತೆಗೆದುಕೊಂಡಿದ್ದರು.
ಇದೀಗ ಯು.ಪಿ.ಎಸ್.ಸಿಯಲ್ಲಿ 132ನೇ ರ‍್ಯಾಂಕ್ ಪಡೆದಿದ್ದು, ಐಪಿಎಸ್ ಶ್ರೇಣಿಯ ಹುದ್ದೆ ಸಿಗಲಿದೆ. ‘ನನಗೆ ಜನರೊಂದಿಗೆ ಸಂಪರ್ಕ ಇರುವ ಹುದ್ದೆ ಪಡೆಯಬೇಕು ಎಂಬ ಆಸೆಯಿತ್ತು. ಆದಾಯ ಮತ್ತು ತೆರಿಗೆ ವಿಭಾಗದಲ್ಲಿ ಅದಕ್ಕೆ ಆಸ್ಪದ ಇರಲಿಲ್ಲ. ಹೀಗಾಗಿ ನಾನು ಒಂದು ವರ್ಷದ ರಜೆ ಪಡೆದು ಪುನಃ ಪರೀಕ್ಷೆ ಬರೆದಿದ್ದು ,ಇದೀಗ ಸಿಕ್ಕ ಫಲಿತಾಂತ ತೃಪ್ತಿ ತಂದಿದೆ’ ಎಂದು ವಿನೋದ್ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

-ಶುಕ್ರಾಜ ಕುಮಾರ್ , ಕೊಪ್ಪಳ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments