ಸ್ಯಾಂಡಲ್​ವುಡ್​ಗೆ ಉಪ್ಪಿ ಎಂಟ್ರಿ ಕೊಟ್ಟ ದಿನವೇ ಮಗಳ ಎಂಟ್ರಿಯೂ ಆಯ್ತು..!

0
213

ರಿಯಲ್ ಸ್ಟಾರ್ ಬಣ್ಣದ ಬದುಕಿಗೆ ಮೂವತ್ತು ವರ್ಷ ತುಂಬಿದೆ. ಇದೇ ಸಂಭ್ರಮದಲ್ಲಿರುವ ಉಪ್ಪಿಗೆ ಮತ್ತೊಂದು ಸಂಭ್ರಮದ ದಿನ ಬಂದಿದೆ ತಾವು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಆದ ದಿನವೇ ಮತ್ತೊಂದು ವಿಶೇಷ ಸಂದರ್ಭ ಉಪ್ಪಿ ಲೈಫ್ ಅಲ್ಲಿ ಎದುರಾಗಿದೆ .
ರಿಯಲ್ ಸ್ಟಾರ್ ಉಪೇಂದ್ರ.. ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನತೆಯಿಂದ ಹೆಸರಾದವರು. ವಿಭಿನ್ನ ಕಥಾಹಂದರಗಳ ಸಿನಿಮಾಗಳನ್ನು ನಿರ್ದೇಶಿಸಿದ ಅವರು ನಾಯಕನಟರೂ ಆದರು. ಪ್ರಸ್ತುತ ‘ಪ್ರಜಾಕೀಯ’ದ ಮೂಲಕ ರಾಜಕೀಯಕ್ಕೂ ಎಂಟ್ರಿ ಕೊಡುತ್ತಿದ್ದಾರೆ.
ಸರಿಯಾಗಿ 30 ವರ್ಷದ ಹಿಂದೆ ಉಪೇಂದ್ರ ನಿರ್ದೇಶಕರಾಗಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನಟ-ನಿರ್ದೇಶಕ ಕಾಶೀನಾಥ್ ಬಳಿ ಸಹ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎಷ್ಟೋ ಸಿನಿಮಾಗಳಿಗೆ ಹಾಡು ಮತ್ತು ಸಂಭಾಷಣೆ ಬರೆಯುತ್ತಿದ್ದರು.
ಇನ್ನು ಕಾಶೀನಾಥ್ ನಟನೆಯೊಂದಿಗೆ ನಿರ್ದೇಶನ ಮಾಡಿದ್ದ ‘ಅನಂತನ ಅವಾಂತರ’ ಚಿತ್ರದ ‘ಕಮಾನ್ ಕಮಾನ್ ಕಾಮಣ್ಣ’ ಹಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಉಪ್ಪಿ ತೆರೆಯ ಮೇಲೆ ಕಾಣಿಸಿಕೊಂಡರು. ಈ ಸಿನಿಮಾ 1989 ನೇ ಇಸವಿಯಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಶುರುವಾದ ಉಪ್ಪಿಯ ಜರ್ನಿ ಸದ್ಯಕ್ಕೆ ‘ಐ ಲವ್ ಯೂ’ ಚಿತ್ರದವರೆಗೂ ಬಂದಿದೆ.
‘ತರ್ಲೆ ನನ್ಮಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪ್ಪಿ ‘ಶ್’, ‘ಓಂ’, ‘ಆಪರೇಷನ್ ಅಂತ’, ‘ಸ್ವಸ್ತಿಕ್’ ಚಿತ್ರಗಳನ್ನು ನಿರ್ದೇಶಿಸಿದರು. ನಂತರ ತಾವೇ ನಾಯಕರಾಗಿದ್ದ ‘ಎ’, ‘ಉಪೇಂದ್ರ’, ‘ಸೂಪರ್’ ಹಾಗೂ ‘ಉಪ್ಪಿ-2’ ಚಿತ್ರಗಳನ್ನು ಸಹ ನಿರ್ದೇಶನ ಮಾಡಿದರು. ಹಾಗೆಯೇ ಕೆಲವೊಂದು ಚಿತ್ರಗಳಲ್ಲಿ ಅತಿಥಿ ನಟರಾಗಿಯೂ ನಟಿಸಿದ್ದು, ಕೆಲವೊಂದು ಚಿತ್ರಗಳಿಗೆ ಹಾಡುವ ಮೂಲಕ ಗಾಯಕರೂ ಆಗಿದ್ದಾರೆ.
ಹೀಗೆ ಉಪೇಂದ್ರ ಚಿತ್ರರಂಗದಲ್ಲಿ ಸುಮಾರು ಏಳು-ಬೀಳುಗಳನ್ನು ಕಂಡಿದ್ದರೂ ಸಹ ಈಗಲೂ ಸೂಪರ್ ಸ್ಟಾರ್ ಆಗಿದ್ದಾರೆ. ಇವರು ಅದೆಷ್ಟೇ ಸಿನಿಮಾಗಳಲ್ಲಿ ನಟಿಸಲಿ, ಆದರೆ ಅಭಿಮಾನಿಗಳು ಕೇಳಿಕೊಳ್ಳುವುದೇ ಒಂದೇ,.. ಉಪ್ಪಿ ಸರ್ ಮತ್ತೆ ನಿರ್ದೇಶನ ಮಾಡಿ..
ಉಪ್ಪಿ ಚಿತ್ರರಂಗವನ್ನು ಪ್ರವೇಶಿಸಿದ ದಿನವೇ ಅವ್ರ ಮಗಳು ಐಶ್ವರ್ಯ ಕೂಡಾ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ . ಉಪ್ಪಿಯ ಅನಂತನ ಅವಾಂತರ ಬಿಡುಗಡೆಯಾದ ದಿನ ಉಪ್ಪಿ ಮಗಳು ಹಾಗು ಮಡದಿ ಅಭಿನಯದ ದೇವಕಿ ಚಿತ್ರದ ಟೀಸರ್ ರಿಲೀಸ್ ಆಗಿದೆ .
ಮಗಳ ಅಭಿನಯ ನೋಡಿದ ಉಪ್ಪಿ ಸಹಜವಾಗಿ ಖುಷಿಯಾಗಿದ್ದಾರೆ . ಪ್ರಿಯಾಂಕಾ ಅವರು ನಟಿಸಿದ ಯಶಸ್ವಿ ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ . ದೇವಕಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಉಪ್ಪಿ ಗೆ ಡಬಲ್ ಖುಷಿ ಕೊಟ್ಟಿದೆ
-ಮನೋಜ್ ನರಗುಂದಕರ್

LEAVE A REPLY

Please enter your comment!
Please enter your name here