Sunday, May 29, 2022
Powertv Logo
Homeಸಿನಿಮಾಉಪೇಂದ್ರ ಪ್ರಕಾರ ಇವರೇ ನಿಜವಾದ ದೇಶಪ್ರೇಮಿಗಳು!

ಉಪೇಂದ್ರ ಪ್ರಕಾರ ಇವರೇ ನಿಜವಾದ ದೇಶಪ್ರೇಮಿಗಳು!

ಬೆಂಗಳೂರು: ರಾಜಕಾರಣದ ಬಗ್ಗೆ ಚಿಂತನೆ ನಡೆಸುತ್ತಿರುವ ನಟ, ನಿರ್ದೇಶಕ ಉಪೇಂದ್ರ ಆಗಾಗ ಜನರಿಗೆ ರಾಜಕಾರಣದ ಬಗ್ಗೆ ಅರಿವು ಮೂಡಿಸತ್ತಲೇ ಬಂದಿದ್ದಾರೆ. ಇದೀಗ ಭಾರತದ ರಾಜಕೀಯದ ಬಗ್ಗೆ ಅವಲೋಕನ ಮಾಡಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಉಪೇಂದ್ರ ಹೇಳಿರುವಂತೆ ನಿಜವಾದ ದೇಶಪ್ರೇಮ ಇರುವವನು ಮೊದಲು ರಾಜಕೀಯದ ದೋಷಗಳನ್ನು ವಿರೋಧಿಸುತ್ತಾನೆ ಹಾಗೂ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ. ಅದನ್ನು ಬಿಟ್ಟು ರಾಜಕೀಯದಲ್ಲಿ ತಪ್ಪುಗಳಿವೆಯೆಂದು ಗೊತ್ತಿದ್ದು ಅದನ್ನು ಸಮರ್ಥಿಸಿಕೊಳ್ಳುವವನು ಆತ ಒಂದು ಹಣಕ್ಕೆ ಮಾರಾಟವಾಗಿರುತ್ತಾನೆ ಇಲ್ಲವಾದರೆ ಭಾವನಾತ್ಮಕವಾಗಿ ಮೂರ್ಖನಾಗಿರುತ್ತಾನೆ.

ಮತ್ತೊಂದು ಟ್ವೀಟ್ ಮಾಡಿರುವ ಉಪೇಂದ್ರ ರಾಜಕೀಯ ವ್ಯವಸ್ಥೆ ಬರೀ ತಪ್ಪುಗಳಿಂದಲೇ ಕೂಡಿದ್ದು, ಈ ಭ್ರಷ್ಟ ಅವ್ಯವಸ್ಥೆಯಿಂದ ಸಮಾಜದ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂಬ ಭ್ರಮೆ ಇದೆ. ಅಷ್ಟೇ ಅಲ್ಲದೇ ಅದನ್ನುಇಂದಿಗೂ ಯುವ ಸಮುದಾಯ ನಂಬಿಕೊಂಡು ಬಂದಿದೆ ಎಂದು ಬರೆದಿದ್ದಾರೆ.

 

15 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments