Home ಸಿನಿ ಪವರ್ ಉಪೇಂದ್ರ ಅವರಲ್ಲಿ ಸುದೀಪ್​ ಮಾಡಿದ ಆ ದೊಡ್ಡ ರಿಕ್ವೆಸ್ಟ್​ ಏನ್ ಗೊತ್ತಾ?

ಉಪೇಂದ್ರ ಅವರಲ್ಲಿ ಸುದೀಪ್​ ಮಾಡಿದ ಆ ದೊಡ್ಡ ರಿಕ್ವೆಸ್ಟ್​ ಏನ್ ಗೊತ್ತಾ?

 ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 2016ರಲ್ಲಿ ‘ಮುಕುಂದ ಮುರಾರಿ’ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು. ಮುಕುಂದನಾಗಿ ಉಪ್ಪಿ, ಮುರಾರಿಯಾಗಿ ಸುದೀಪ್ ಕಾಣಿಸಿಕೊಂಡಿದ್ರು. ಈಗ ಮತ್ತೆ ‘ಮುಕುಂದ’ ಉಪ್ಪಿಗೆ ‘ಮುರಾರಿ’ ಸುದೀಪ್ ಸಾಥ್ ನೀಡಿದ್ದಾರೆ.
ಹಾಗಂತ ಉಪ್ಪಿ ಮತ್ತು ಕಿಚ್ಚ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸ್ತಾ ಇದ್ದಾರಾ..? ಊಹ್ಞೂಂ, ಊಹ್ಞೂಂ ಸುದೀಪ್, ಉಪೇಂದ್ರ ಒಟ್ಟಿಗೆ ಮೂವಿ ಮಾಡೋ ಸುದ್ದಿ ಸದ್ಯಕ್ಕಿಲ್ಲ… ಉಪ್ಪಿಗೆ ಕಿಚ್ಚ ಸಾಥ್ ಕೊಟ್ಟಿದ್ದು ‘ಐ ಲವ್ ಯು’ ಅಂತ ಕೂಗಿ ಕೂಗಿ ಹೇಳೋಕೆ!
ಹೌದು, ಉಪೇಂದ್ರ ಮತ್ತು ರಚಿತಾರಾಮ್ ನಟನೆಯ ಐ ಲವ್ ಯು ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಜೂನ್ 14ರಂದು ಉಪ್ಪಿ ‘ಐ ಲವ್​ ಯು’ ಹೇಳಲಿದ್ದಾರೆ. ಇದಕ್ಕೀಗ ಕಿಚ್ಚ ಬಲ ತುಂಬಿದ್ದಾರೆ. ಮುಕುಂದನ ಟ್ರೇಲರ್ ಅನ್ನು ಮುರಾರಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ..!
ಆರ್ ಚಂದ್ರು ನಿರ್ದೇಶಿಸಿ, ನಿರ್ಮಿಸಿರೋ ಚಿತ್ರ ಐ ಲವ್​ ಯು. ಮೊದಲೇ ಹೇಳಿದಂತೆ ಉಪ್ಪಿಗೆ ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ. ಪೋಸ್ಟರ್, ಟೀಸರ್​ನಿಂದ ಈಗಾಗಲೇ ಗಮನ ಸೆಳೆದಿದ್ದ ‘ಐ ಲವ್ ಯು’ ಟ್ರೇಲರ್​ನಿಂದ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ.
ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ ಉಪ್ಪಿಯಲ್ಲಿ ಮಹಾ ಮನವಿಯೊಂದನ್ನು ಮಾಡಿದ್ದಾರೆ. ‘ಎ’, ‘ಓಂ’ , ‘ಓಂಕಾರ’ , ‘ಆಮರೇಷನ್​ ಅಂತ’, ಶ್​, ಸ್ವಸ್ತಿಕ್​, ‘ತರ್ಲೆ ನನ್ ಮಗ’, ಉಪೇಂದ್ರ, ‘ಸೂಪರ್​’, ‘ಉಪ್ಪಿ-2’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಉಪ್ಪಿ, ಉಪ್ಪಿ-2 ಆದ್ಮೇಲೆ ಯಾವ ಸಿನಿಮಾವನ್ನೂ ನಿರ್ದೇಶಿಸಿಲ್ಲ. ಉಪ್ಪಿ ಆ್ಯಕ್ಷನ್ ಕಟ್ ಹೇಳ್ಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಮನದಾಸೆ… ಈ ಆಸೆ ಕನ್ನಡದ ಬಾದ್​ ಷಾ ಸುದೀಪ್ ಅವರದ್ದೂ ಕೂಡ..!
ಬೈಟ್ : ಕಿಚ್ಚ ಸುದೀಪ್, ನಟ
ಉಪೇಂದ್ರ ಅವರು ಆದಷ್ಟು ಬೇಗ ಮತ್ತೆ ನಿರ್ದೇಶನ ಮಾಡ್ಬೇಕು. ಉಪ್ಪಿ ಮತ್ತೆ ಆ್ಯಕ್ಷನ್ ಕಟ್ ಹೇಳಲೇ ಬೇಕು. ನಾನು ಈ ಕಾರ್ಯಕ್ರಮಕ್ಕೆ ಬಂದಿರೋದೆ ಇದನ್ನು ಕೇಳ್ಕೋಂಡು ಹೋಗೋಕೆ ಅಂತ ಹೇಳೋ ಮೂಲಕ ಮತ್ತೆ ನಿರ್ದೇಶನ ಮಾಡಿ ಅಂತ ರಿಕ್ವೆಸ್ಟ್ ಮಾಡಿಕೊಂಡ್ರು. ಸುದೀಪ್ ಮನವಿಗೆ ಉಪ್ಪಿ ನಗುವಿನಿಂದ ಸಮ್ಮತಿ ನೀಡಿದ್ರು.
ಒಟ್ನಲ್ಲಿ ಉಪ್ಪಿಯ ‘ಐ ಲವ್ ಯು’ಗೆ ಸಾಥ್ ನೀಡಿರುವ ಸುದೀಪ್.. ಮತ್ತೆ ನಿರ್ದೇಶನದಲ್ಲಿ ಮುಖಮಾಡುವಂತೆ ಉಪ್ಪಿಗೆ ಕೇಳಿಕೊಂಡಿದ್ದಾರೆ. ಸಿನಿಮಾದಿಂದ ಸ್ವಲ್ಪ ದಿನ ಬಿಡುವು ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ‘ಉತ್ತಮ ಪ್ರಜಾಕೀಯ ಪಾರ್ಟಿ’ಯ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬ್ಯುಸಿ ಇದ್ದ ಉಪ್ಪಿ ‘ಐ ಲವ್ ಯು’ ಅನ್ನುತ್ತಾ ಕಮ್​ ಬ್ಯಾಕ್ ಆಗ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments